ಮುಡಾ ಹಗರಣದಲ್ಲಿ ₹700 ಕೋಟಿ ಅಕ್ರಮ ನಡೆದಿದೆ ಎಂದು ED ತನಿಖೆಯಲ್ಲಿ ದೃಢವಾಗಿದೆ. 1095 ಸೈಟ್ಗಳು ಬೇನಾಮಿ ವ್ಯಕ್ತಿಗಳ ಹೆಸರಲ್ಲಿ ಹಂಚಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿಗೂ ಅಕ್ರಮವಾಗಿ 14 ಸೈಟ್ ಹಂಚಿಕೆಯಾಗಿದೆ. ತನಿಖೆ ನಡೆಸುವಂತೆ ಇಡಿ ಅಧಿಕಾರಿಗಳಿಂದ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದಾರೆ.
ಸಿಎಂ ಪತ್ನಿ ಪಾರ್ವತಿ, ಬಾಮೈದನ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಮುಡಾದಲ್ಲಿ 700 ಕೋಟಿ ಹಗರಣ ನಡೆದಿರೋದು ಧೃಢವಾಗಿದೆ. ದಾಖಲೆ ತಿರುಚಿ, ಫೋರ್ಜರಿ ಮಾಡಿ, ಪ್ರಭಾವ ಬೀರಿ 14 ಸೈಟ್ ಹಂಚಿಕೆ ಮಾಡಿದ್ದಾರೆ. ಸೈಟನ್ನೇ ಕೃಷಿ ಭೂಮಿ ಎಂದು ತೋರಿಸಿ ಜಾಗ ಖರೀದಿಸಿದ್ದಾರೆ. ಜಾಗದ ಮಾಲೀಕತ್ವ ಸಿಗೋ ಮೊದಲೇ ಸಿಎಂ ಪತ್ನಿಗೆ ಸೈಟ್ ಮಂಜೂರು ಮಾಡಿದ್ದಾರೆ.
ಲೋಕಾಯುಕ್ತಗೆ ಪತ್ರ ಬರೆದಿದ್ದಾರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು. ಸಿಎಂ ಬಾಮೈದನ ಮೇಲೆ ಇಡಿ ಅಧಿಕಾರಿಗಳು ಹಲವು ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಲೋಕಾಯುಕ್ತಕ್ಕೆ ಇಡಿ ಲೆಟರ್ ನೀಡಿದೆ. ಗ್ಯಾರಂಟಿ ನ್ಯೂಸ್ಗೆ ಇಡಿ ಅಧಿಕಾರಿಗಳು ಬರೆದ ಪತ್ರ ಲಭ್ಯವಾಗಿದೆ. ಮುಡಾ ಹಗರಣಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ ಇಡಿ ಅಧಿಕಾರಿಗಳು. ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯಗೆ ಇಡಿ ಲೆಟರ್ ಟೆನ್ಷನ್ ಕೊಟ್ಟಿದೆ.