ಮುಡಾ ಕೇಸ್ನಲ್ಲಿ ಸಿದ್ದರಾಮಯ್ಯ ನವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಕೊಟ್ಟ ಅನುಮತಿಯನ್ನ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯನವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅದಕ್ಕೆ ಪೂರಕವಾಗಿ ಇಂದು ಅರ್ಜಿ ವಿಚಾರಣೆಯು ಹೈಕೋರ್ಟ್ ನಲ್ಲಿ ನಡೆದಿದ್ದು, ಸಿಎಂ ಪರ ವಕೀಲರಾದ ಕಪಿಲ್ ಸಿಬಲ್ ರವರು ರಾಜ್ಯಪಾಲರಿಗೆ ಟಕ್ಕರ್ ಕೊಟ್ಟಿದ್ದಾರೆ. ಹೈಕೋರ್ಟ್ ನಲ್ಲಿ ಗವರ್ನರ್ ವಿರುದ್ಧ ವಕೀಲ ಕಪಿಲ್ ಸಿಬಲ್ ವಾದ ಮಂಡನೆ ಮಾಡಿದ್ದಾರೆ.
ಗವರ್ನರ್ ಅಧಿಕಾರವೇ ಪ್ರಶ್ನಾರ್ಹ ಎಂದಿದ್ದಾರೆ ‘ಸುಪ್ರೀಂ’ ಲಾಯರ್. ಹೈಕೋರ್ಟ್ ನಲ್ಲಿ ಗವರ್ನರ್ ಅಧಿಕಾರವನ್ನೇ ಪ್ರಶ್ನೆ ಮಾಡಿದ್ದಾರೆ ಕಪಿಲ್ ಸಿಬಲ್. ‘ರಾಜ್ಯಪಾಲರಿಗೆ ತನಿಖೆಗೆ ಆದೇಶಿಸುವ ಅಧಿಕಾರವೇ ಇಲ್ಲ’, ಚುನಾಯಿತ ಮುಖ್ಯಮಂತ್ರಿ ವಿರುದ್ಧ ಗವರ್ನರ್ ಆದೇಶ ಕೊಡಲು ಸಾಧ್ಯವೇ.? ಮುಖ್ಯಮಂತ್ರಿಗಳಾದವರು ಜನರಿಂದ ಆಯ್ಕೆಯಾಗಿ ಬಂದವರು.. ಆದರೆ ರಾಜ್ಯಪಾಲರಾದವರು ನೇಮಕವಾಗಿ ಬಂದವರು. ನೇಮಕವಾದವರು..ಚುನಾಯಿತ ಪ್ರತಿನಿಧಿಗಿಂತ ಅತೀತರಾ.? ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರು ಪ್ರಕರಣವನ್ನು ರಾಷ್ಟ್ರಪತಿಗೆ ಕಳುಹಿಸಬಹುದಿತ್ತು. ಇದು ಯಾವುದೇ ಪಕ್ಷದ ಮುಖ್ಯಮಂತ್ರಿ, ಮಂತ್ರಿಗೆ ಸಂಬಂಧಿಸಿದ್ದಲ್ಲ. ಇದು ನಮ್ಮ ದೇಶದ ರಾಜ್ಯಾಡಳಿತಕ್ಕೆ ಸಂಬಂಧಿಸಿದ್ದಾಗಿದೆ. ರಾಜ್ಯಪಾಲರಿಗೆ ಅಧಿಕಾರ ಕೊಟ್ರೆ ‘ಅರಾಜಕತೆ ಸೃಷ್ಟಿ’ ಆಗುತ್ತೆ . ಈ ದೇಶದಲ್ಲಿ ‘ಅರಾಜಕತೆ ಸೃಷ್ಟಿ’ ಆಗುತ್ತೆ ಎಂದು ಹೈಕೋರ್ಟ್ ನಲ್ಲಿ ಗೆಹ್ಲೋಟ್ ವಿರುದ್ಧ ಕಪಿಲ್ ಸಿಬಲ್ ಪ್ರಬಲ ವಾದ ಮಂಡಿಸಿದ್ದಾರೆ.