ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ನವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಮುಡಾ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದಾರೆ. ಲೋಕಾಯುಕ್ತಕ್ಕೆ ಬರೆದಿರುವ ಪತ್ರ ನಿಮ್ಮ ಗ್ಯಾರಂಟಿ ನ್ಯೂಸ್ಗೆ ಲಭ್ಯವಾಗಿದೆ.
ಸಿಎಂ ಪತ್ನಿ, ಬಾಮೈದನ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತಗೆ ಇಡಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಈಗ ಲೊಕಾಯುಕ್ತ ಜೊತೆ ಇಡಿ ಟೆನ್ಷನ್ ಶುರುವಾಗಿದೆ. ಮುಡಾದಲ್ಲಿ 700 ಕೋಟಿ ಹಗರಣದ ಆರೋಪ ಕೇಳಿಬಂದಿದೆ. ಇಡಿ ಅಧಿಕಾರಿಗಳಿಂದ ಲೋಕಾಯುಕ್ತಕ್ಕೆ ಪತ್ರ ಬರೆಯಲಾಗಿದೆ. ದಾಖಲೆ ತಿರುಚಿ, ಪೋರ್ಜರಿ ಮಾಡಿ,ಪ್ರಭಾವ ಬೀರಿ 14 ಸೈಟ್ ಹಂಚಿಕೆಯಾಗಿದೆ ಎಂದು ಇಡಿ ಪತ್ರ ಬರೆದಿದೆ. ಸೈಟ್ನ್ನೇ ಕೃಷಿ ಭೂಮಿ ಎಂದು ತೋರಿಸಿ ಜಾಗ ಖರೀದಿ ಮಾಡಿದ್ದಾರೆ. ಜಾಗದ ಮಾಲೀಕತ್ವ ಸಿಗುವ ಮೊದಲೇ ಸಿಎಂ ಪತ್ನಿಗೆ ಸೈಟ್ ಮಂಜೂರು ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಬಾಮೈದನ ಮೇಲೆ ಹಲವು ಆರೋಪ ಮಾಡಿ ಲೋಕಾಯುಕ್ತಗೆ ಇಡಿ ಪತ್ರ ಬರೆದಿದ್ದಾರೆ.