ಭಾರತದನಂಬರ್ 1 ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಶೂಟ್ ಸಖತ್ ಆಗಿಯೇ ಆಗಿದೆ. ಕಳೆದ ಮಾರ್ಚ್ತಿಂಗಳಿನಲ್ಲಿ3 ದಿನ ಗುಜರಾತ್ನ ಜಾಮ್ನಗರದಲ್ಲಿ ಪ್ರಿ-ವೆಡ್ಡಿಂಗ್ ಕಾರ್ಯಕ್ರಮಗಲು ನಡೆದಿತ್ತು. ಕೇವಲ ಮೂರು ದಿನಗಳ ಕಾರ್ಯಕ್ರಮಕ್ಕೆ ಬರೋಬರೀ1200 ಕೋಟಿ ವ್ಯಯ ಮಾಡಲಾಗಿತ್ತು.
ಪ್ರೀ ವೆಡ್ಡಿಂಗ್ಗೆ ಭಾರತದಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಸೆಲೆಬ್ರಿಟಿಗಳು ಭಾಗಿಯಾಗಿದರು. ಆ ಫೋಟೋಗಳು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಗಿಯೇ ಸದ್ದು ಮಾಡಿತ್ತು.
ರೀಸೆಂಟ್ ಆಗಿ ಮುಖೇಶ್ ಅಂಬಾನಿ ಲಂಡನ್ನಲ್ಲಿ 592 ಕೋಟಿ ಮೌಲ್ಯದ ಸ್ಟೋಕ್ ಪಾರ್ಕ್ ಎಸ್ಟೇಟ್ ಖರೀದಿಸಿದ್ದಾರೆ.
ಆದರೆ ಲಂಡನ್ ಸ್ಟೋಕ್ ಪಾರ್ಕ್ ಎಸ್ಟೇಟ್ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಫಂಕ್ಷನ್ ನಡೆಯಲಿದೆ ಅಂತ ಗೊತ್ತಾಗಿದೆ. ಜುಲೈ 12ರಂದು ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡೆಯಲಿದೆ.