ನವದೆಹಲಿ: ಭಾರತೀಯ- ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಅವರಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಒಲಿದು ಬಂದಿದೆ. ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಂ ವಿಭಾಗದಲ್ಲಿ ‘ತ್ರಿವೇಣಿ’ ಆಲ್ಬಂಗಾಗಿ ಅವರಿಗೆ ಗ್ರ್ಯಾಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಲಾಸ್ ಏಂಜಲೀಸ್ನ ಕ್ರಿಪ್ಟೋ ಡಾಟ್ ಕಾಮ್ ಅರೆನಾದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸತ್ಕರಿಸಲಾಗಿದೆ. ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ ಅತಿದೊಡ್ಡ ಸಂಗೀತ ಪ್ರಶಸ್ತಿಯ 67 ನೇ ಆವೃತ್ತಿ ಇದಾಗಿದೆ.
ಟಂಡನ್ ಪೆಪ್ಸಿಕೋದ ಮಾಜಿ ಸಿಇಒ ಇಂದ್ರಾ ನೂಯಿ ಅವರ ಹಿರಿಯ ಸಹೋದರಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್ಮ್ಯಾನ್ ಮತ್ತು ಜಪಾನಿನ ಸೆಲಿಸ್ಟ್ ಎರು ಮಾಟ್ಸುಮೊಟೊ ಅವರೊಂದಿಗೆ ಚಂದ್ರಿಕಾ ಈ ಪ್ರಶಸ್ತಿ ಗೆದ್ದಿದ್ದಾರೆ.
ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಇದೊಂದು ಅದ್ಭುತ ಕ್ಷಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನಾವು ಈ ಪ್ರಶಸ್ತಿ ಗೆದ್ದಿರುವುದು ನಿಜವಾಗಿಯೂ ನಮಗೆ ವಿಶೇಷ ಕ್ಷಣವಾಗಿದೆ. ಅಸಾಧಾರಣ ಸಂಗೀತ ದಿಗ್ಗಜ್ಜರನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದಿರುವುದು ಆನಂದವನ್ನುಂಟು ಮಾಡಿದೆ ಎಂದು ಚಂದ್ರಿಕಾ ಅವರು ಖುಷಿ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc