ಕುಂಭಮೇಳದಿಂದ ಮರಳುತ್ತಿದ್ದ ಬೀದರ್ ಪ್ರವಾಸಿಗರು 6 ಜನ ಮೃತಪಟ್ಟಿದ್ದಾರೆ!

Befunky collage (51)

ಕುಂಭಮೇಳಕ್ಕೆ ಭೇಟಿ ನೀಡಿ ಬೀದರ್‌ಗೆ ಮರಳುತ್ತಿದ್ದ ಒಂದು ವಾಹನ ವಾರಣಾಸಿಯಲ್ಲಿ ಭೀಕರ ಅಪಘಾತಕ್ಕೆ ಗುರಿಯಾಗಿದೆ. ಈ ಘಟನೆಯಲ್ಲಿ ಒಂದೇ ಕುಟುಂಬದ 4 ಸದಸ್ಯರು ಸೇರಿದಂತೆ 6 ಜನರು ಮೃತಪಟ್ಟಿದ್ದು, 8 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರು ಕೋಮಾ ಸ್ಥಿತಿಯಲ್ಲಿ ವಾರಣಾಸಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೀರುವುದಾಗಿ ಜಿಲ್ಲಾಡಳಿತ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರಾದವರಲ್ಲಿ ಸಂತೋಷ, ಸುನೀತಾ, ನೀಲಮ್ಮ, ಲಕ್ಷ್ಮಿಬಾಯಿ, ಕಲಾವತಿ ಮತ್ತು ಸುಲೋಚನಾ ಸೇರಿದ್ದಾರೆ. ಇವರಲ್ಲಿ ಮೊದಲ ನಾಲ್ವರು ಒಂದೇ ಕುಟುಂಬದ ಸದಸ್ಯರು. ಅಪಘಾತದ ನಂತರ ಮೃತದೇಹಗಳನ್ನು ಬೀದರ್‌ಗೆ ಆಂಬುಲೆನ್ಸ್‌ ಮೂಲಕ ಸಾಗಿಸಲಾಗುತ್ತಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಬೀದರ್‌ ತಲುಪುವ ನಿರೀಕ್ಷೆಯಿದೆ. ಗಾಯಗೊಂಡ 7 ಜನರನ್ನು ವಾರಣಾಸಿಯಿಂದ ಹೈದರಾಬಾದ್‌ಗೆ ವಿಮಾನದ ಮೂಲಕ ಸಾಗಿಸಲಾಗಿದೆ. ಅಲ್ಲಿಂದ ಬೀದರ್‌ಗೆ ರಸ್ತೆ ಮಾರ್ಗದಲ್ಲಿ ತಲುಪಿಸಲಾಗುವುದು.

ADVERTISEMENT
ADVERTISEMENT

ಮೃತರ ಕುಟುಂಬಗಳಿಗೆ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಈಗಾಗಲೇ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

 

Exit mobile version