“ವೈದ್ಯೋ ನಾರಾಯಣೋ ಹರಿಃ” ಎಂಬ ಮಾತಿಗೆ ಅವಮಾನ ತರುವಂತೆ ಮಧ್ಯಪ್ರದೇಶದ ದಾಮೋಹ್‌ನಲ್ಲಿ ನಕಲಿ ವೈದ್ಯನೊಬ್ಬ 15 ಹಾರ್ಟ್ ಸರ್ಜರಿಗಳನ್ನು ಮಾಡಿ, 7 ಮಂದಿಯ ಪ್ರಾಣ ತೆಗೆದಿದ್ದಾನೆ. ಈ ಕಾಮುಕ ನಕಲಿ ವೈದ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದು, ರೋಗಿಗಳ ಪಾಲಿಗೆ ದೆವ್ವವಾಗಿ ಮಾರ್ಪಟ್ಟಿದ್ದಾನೆ.
ಆರೋಪಿಯ ನಿಜವಾದ ಹೆಸರು ನರೇಂದ್ರ ವಿಕ್ರಮಾದಿತ್ಯ ಯಾದವ್. ಈತ ತಾನು ಲಂಡನ್‌ನಲ್ಲಿ ತರಬೇತಿ ಪಡೆದಿದ್ದೇನೆ ಎಂದು ಸುಳ್ಳು ಹೇಳಿ, ಇಂಗ್ಲೆಂಡ್‌ನ ಪ್ರಸಿದ್ಧ ವೈದ್ಯ ಡಾ. ಜಾನ್ ಕಮ್ ಹೆಸರನ್ನು ದುರುಪಯೋಗ ಮಾಡಿಕೊಂಡು ಎಲ್ಲರನ್ನೂ ದಾರಿ ತಪ್ಪಿಸಿದ್ದಾನೆ. 2025ರ ಜನವರಿಯಲ್ಲಿ ದಾಮೋಹ್ ಜಿಲ್ಲೆಯ ಮಿಷನರಿ ಆಸ್ಪತ್ರೆಗೆ ಸೇರಿದ ಈ ನಕಲಿ ವೈದ್ಯ, ತಕ್ಷಣ 15 ಹಾರ್ಟ್ ಸರ್ಜರಿಗಳನ್ನು ಮಾಡಿದ್ದಾನೆ. ಆದರೆ, ಈ ಸರ್ಜರಿಗಳಲ್ಲಿ 7 ಮಂದಿ ರೋಗಿಗಳು ಸಾವನ್ನಪ್ಪಿದ್ದಾರೆ. ಈ ಘಟನೆಯ ಬಳಿಕ ಫೆಬ್ರವರಿಯಲ್ಲಿ ಈತ ಆಸ್ಪತ್ರೆಯಿಂದ ನಿಗೂಢವಾಗಿ ಕಣ್ಮರೆಯಾಗಿದ್ದಾನೆ.
ಆಘಾತಕಾರಿಯೆಂದರೆ, 7 ರೋಗಿಗಳ ಸಾವಿನ ಸುದ್ದಿಯನ್ನು ಆಸ್ಪತ್ರೆ ಆಡಳಿತ ಮಂಡಳಿ ಮುಚ್ಚಿಟ್ಟಿದೆ. ಈ ಯಡವಟ್ಟಿನಿಂದಾಗಿ ನಕಲಿ ವೈದ್ಯನ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಈ ವಿಷಯ ಲಂಡನ್‌ನ ನಿಜವಾದ ಡಾ. ಜಾನ್ ಕಮ್ ಅವರಿಗೂ ತಿಳಿದಿದ್ದು, ಅವರು ತಕ್ಷಣ ತಮ್ಮ ಹೆಸರನ್ನು ದುರುಪಯೋಗ ಮಾಡಿಕೊಂಡ ಈ ನಕಲಿ ವೈದ್ಯನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಮಧ್ಯಪ್ರದೇಶದ ಜಿಲ್ಲಾ ವೈದ್ಯಾಧಿಕಾರಿಯು ಈ ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಸುಧೀರ್ ಕೊಚ್ಚಾರ್‌ಗೆ ವರದಿ ಸಲ್ಲಿಸಿದ್ದಾರೆ. ಇಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯ ಪ್ರಿಯಾಂಕ್ ಕಾಂಗೂರು ದಾಮೋಹ್‌ಗೆ ಭೇಟಿ ನೀಡಿ, ಘಟನೆಯ ತನಿಖೆಯನ್ನು ಕೈಗೊಂಡಿದ್ದಾರೆ. ಇದೇ ವೇಳೆ, ದಾಮೋಹ್ ಮಿಷನರಿ ಆಸ್ಪತ್ರೆಯು ಆಯುಷ್ಮಾನ್ ಭಾರತ್ ಯೋಜನೆಯಡಿ ಹಣ ಪಡೆದಿರುವುದು ಪತ್ತೆಯಾಗಿದೆ. ಇದಲ್ಲದೇ, ತೆಲಂಗಾಣ ರಾಜ್ಯದಲ್ಲೂ ನರೇಂದ್ರ ವಿಕ್ರಮಾದಿತ್ಯ ಯಾದವ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.