ಹೋಳಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಿರುವಂತೆ ಮಸೀದಿಗಳಿಗೆ ಟಾರ್ಪಲ್ ಮುಚ್ಚಿರುವಂತ ಚಿತ್ರಣ ಉತ್ತರಪ್ರದೇಶದಲ್ಲಿ ಕಂಡುಬಂದಿದೆ. ಹೋಳಿ ಹಬ್ಬ ಶುಕ್ರವಾರವೇ ಬಂದಿರುವುದು ಪೊಲೀಸರಿಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು.
ಮಸೀದಿಗಳಿಗೆ ಬಣ್ಣಗಳಿಂದ ರಕ್ಷಣೆ ನೀಡಲು ಪೊಲೀಸರು ಈ ಕ್ರಮ ಜರುಗಿಸಿದ್ದಾರೆ. ಮುಸ್ಲಿಂಮರ ಪಾಲಿಗೆ ಶುಕ್ರವಾರದಂದೇ ಹೋಳಿ ಹಬ್ಬ ಬಂದ ಹಿನ್ನೆಲೆಯಲ್ಲಿ ಶಹಜಹನ್‌ಪುರ ಜಿಲ್ಲೆಯ 60ಕ್ಕೂ ಹೆಚ್ಚು ಹಾಗೂ ಅಲೀಗಢದ ಎಲ್ಲಾ ಮಸೀದಿಗಳಿಗೆ ಹೀಗೆ ಟಾರ್ಪಲ್ ಹಾಕುವ ಮೂಲಕ ಸಂಘರ್ಷಕ್ಕೆ ತಡೆಯೊಡ್ಡಲಾಗಿದೆ. ಪೊಲೀಸರು ಡ್ರೋನ್ ನಿಯೋಜನೆ ಸೇರಿದಂತೆ ಸಕಲ ಸಿದ್ಧತೆ ನಡೆಸಿರುವ ಪೊಲೀಸರು ಸಾಮಾಜಿಕ ಮಾಧ್ಯಮಗಳ ಮೇಲೂ ಕಣ್ಣುಹಾಯಿಸಿದ್ದಾರೆ.
ಸಂಭಲ್‌ನ ಜಾಮ ಮಸೀದಿ ಸೇರಿ ಎಲ್ಲಾ ಪ್ರಮುಖ ಮಸೀದಿಗಳನ್ನು ಟಾರ್ಪಲ್‌ನಿಂದ ಮುಚ್ಚಿರುವ ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಒಟ್ಟಿನಲ್ಲಿ ಉತ್ತರಪ್ರದೇಶದಲ್ಲಿ ಕೈಗೊಂಡಿರುವ ಪೊಲೀಸರ ಈ ಕ್ರಮ ಸ್ವಾಗತಾರ್ಹ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.