ಬಣ್ಣಗಳ ಹಬ್ಬ.. ಸಂತೋಷ, ಸಮೃದ್ಧಿಯ ಸಂಕೇತದ ಹಬ್ಬ.. ಇಡೀ ದೇಶಾದ್ಯಂತ ಹೋಳಿ ಹಬ್ಬದ ಆಚರಣೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಕಲರ್ಫುಲ್ ಹೋಳಿ ಹಬ್ಬವನ್ನ ಅಷ್ಟೇ ಕಲರ್ಫುಲ್ ಆಗಿ ಆಚರಿಸಲು ದೇಶದ ಜನರು ಉತ್ಸಾಹದಿಂದ ಕಾಯುತ್ತಿದ್ದಾರೆ. ಆದರೆ ಹೈದರಾಬಾದ್ ಜನರು ಮಾತ್ರ ಹೋಳಿ ಆಚರಿಸುವಂತಿಲ್ಲ. ಒಂದು ವೇಳೆ ಹೋಳಿ ಹಬ್ಬವನ್ನ ಆಚರಿಸಿದ್ರೆ ಪೊಲೀಸರು ಬೆಂಡೆತ್ತಿ ಬ್ರೇಕ್ ಹಾಕಲಿದ್ದಾರೆ.
ಹೈದರಾಬಾದ್ನಲ್ಲಿ ಹೋಳಿ ಹಬ್ಬಕ್ಕೆ ಪೊಲೀಸರು ನಿಷೇಧ ಏರಿದ್ದಾರೆ. ಹೋಳಿ ಹಬ್ಬಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಹಲವು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದ್ದಾರೆ. ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಗೂಡುವುದು, ಬೈಕ್, ಕಾರ್ಗಳಲ್ಲಿ ಎಲ್ಲೆಂದರಲ್ಲಿ ಓಡಾಡುವುದು, ಗುಂಪು ಗುಂಪಾಗಿ ಹೋಳಿ ಆಚರಿಸುವುದು ಮಾಡುವಂತಿಲ್ಲ ಎಂದು ಹೈದರಾಬಾದ್ ನಗರ ಪೊಲೀಸ್ ಇಲಾಖೆ ಆಧಿಸೂಚನೆ ಹೊರಡಿಸಿದೆ. ಇಷ್ಟವಿಲ್ಲದ ವ್ಯಕ್ತಿಗಳಿಗೆ ಬಣ್ಣ ಬಳಿಯುವುದು, ಹೋಳಿ ನೀರು ಎರಚುವುದು ಮಾಡಿದರೆ ಮುಲಾಜಿಲ್ಲದೆ ಕ್ರಮತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಹೋಳಿ ಹಬ್ಬದ ಮಾರ್ಗಸೂಚಿ ಸಂಬಂಧ ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಸಿ.ವಿ. ಆನಂದ್ ಹೋಳಿ ಹಬ್ಬದ ಆದೇಶ ಹೊರಡಿಸಿದ್ದಾರೆ. ಈ ಆದೇಶ ಮಾರ್ಚ್ 13ರಂದು ಸಂಜೆ 6 ಗಂಟೆಯಿಂದ ಮಾರ್ಚ್ 15ನೇ ತಾರೀಖು ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರಲಿದೆ. ಸೆಕ್ಷನ್ 22ರ ಅಡಿಯಲ್ಲಿ ನಿಷೇಧಿತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಶಾಂತಿ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು ಮುಂದಾಗಿದೆ. ಹೀಗಾಗಿ ಹೋಳಿ ಹಬ್ಬಕ್ಕೆ ನಿಷೇಧ ಏರಲಾಗಿದೆ. ಇದಕ್ಕೆ ಬಿಜೆಪಿ ಶಾಸಕ ರಾಜಾಸಿಂಗ್ ಸೇರಿದಂತೆ ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರಶಾಂತ್ ಎಸ್ , ಸ್ಪೇಷಲ್ ಡೆಸ್ಕ್, ಗ್ಯಾರಂಟಿ ನ್ಯೂಸ್