ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಭಾರತ, ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕ್ ವಿರುದ್ಧ ದೊಡ್ಡ ರಾಜತಾಂತ್ರಿಕ ಯುದ್ಧಕ್ಕೆ ಕೈಹಾಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಭದ್ರತಾ ಸಭೆಯ ನಂತರ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಾಗಿದ್ದು, ಇವು ತಕ್ಷಣದಿಂದಲೇ ಜಾರಿಗೆ ಬರಲಿವೆ.
ದೆಹಲಿಯಲ್ಲಿರುವ ಪಾಕಿಸ್ತಾನದ ಹೈ ಕಮಿಷನ್ ಅನ್ನು ತಕ್ಷಣದಿಂದ ರದ್ದುಗೊಳಿಸಲಾಗಿದ್ದು, ಭಾರತದಲ್ಲಿರುವ ಪಾಕ್ ರಾಜತಾಂತ್ರಿಕರನ್ನು ಹೊರಹಾಕಲು ಸೂಚನೆ ನೀಡಲಾಗಿದೆ. ಪಾಕ್ ಪ್ರಜೆಗಳಿಗೆ ನೀಡಲಾಗಿರುವ ಎಲ್ಲಾ ವೀಸಾಗಳನ್ನು ರದ್ದುಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ವೀಸಾ ನೀಡುವುದಿಲ್ಲ ಎಂದು ಭಾರತ ಘೋಷಿಸಿದೆ.
ಅದಷ್ಟೇ ಅಲ್ಲದೆ, ಸಿಂಧು ನದಿ ನೀರಿನ ಹಂಚಿಕೆ ಕುರಿತು ಇದ್ದ ಇತಿಹಾಸ ಪ್ರಸಿದ್ಧ ಒಪ್ಪಂದವನ್ನು ಸಹ ಸ್ಥಗಿತಗೊಳಿಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಾಘಾ – ಅಟ್ಟಾರಿ ಗಡಿಯನ್ನು ಕೂಡ ತಕ್ಷಣ ಮುಚ್ಚಲಾಗಿದ್ದು, ಸೇನೆಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ.
ಇದರೊಂದಿಗೆ, ಎಲ್ಲಾ ಪಾಕಿಸ್ತಾನ ಪ್ರಜೆಗಳು ಭಾರತವನ್ನು ತೊರೆಯಲು 48 ಗಂಟೆಗಳ ಗಡುವು ನೀಡಲಾಗಿದೆ. ಈ ನಿರ್ಧಾರಗಳ ಮೂಲಕ ಭಾರತ, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತಿರುವುದು ಸ್ಪಷ್ಟವಾಗಿದೆ.