ಪವಿತ್ರ ಕುಂಭಮೇಳದಲ್ಲಿ ಅಪವಿತ್ರ ಕೆಲಸ..! ಮಹಿಳೆಯರು ಬಟ್ಟೆ ಬದಲಿಸುವ ವಿಡಿಯೋ ಡಾರ್ಕ್ ವೆಬ್ ಅಪ್ಲೋಡ್..!

Befunky collage (7)

ಪ್ರಶಾಂತ್, ಪ್ರೋಗ್ರಾಮ್ ಪ್ರೊಡ್ಯೂಸರ್

ಮಹಾ ಕುಂಭಮೇಳಕ್ಕೆ ವಯಸ್ಸಿನ ಮಿತಿ ಇಲ್ಲದೆ, ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾದವರು ಆಗಮಿಸುತ್ತಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಮಹಿಳೆಯರು ಕೂಡ ಪ್ರಯಾಗ್ ರಾಜ್ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲ ಕಿಡಿಗೇಡಿಗಳು ಕುಂಭ ಮೇಳದಲ್ಲಿ ಸ್ನಾನ ಮಾಡಿ ಬಟ್ಟೆ ಬದಲಿಸುವ ಮಹಿಳೆಯರ ವಿಡಿಯೋಗಳನ್ನ ಚಿತ್ರೀಕರಣ ಮಾಡಿದ್ದಾರೆ. ಆ ವಿಡಿಯೋಗಳನ್ನ ಡಾರ್ಕ್​ವೆಬ್ ಗೆ ಅಪ್ಲೋಡ್ ಮಾಡುತ್ತಿದ್ದ ಭಯಾನಕ ಸತ್ಯವೊಂದು ಬೆಳಕಿಗೆ ಬಂದಿದೆ.

ADVERTISEMENT
ADVERTISEMENT

ಕುಂಭಮೇಳ.. ಹಿಂದೂ ಧರ್ಮದ ಅತಿ ದೊಡ್ಡ ಧಾರ್ಮಿಕ ಉತ್ಸವ.. ಧರ್ಮ ರಕ್ಷಕರು ದರ್ಶನ ನೀಡುವ ಸಂಸ್ಕೃತಿಯ ವೈಭವ.. ಇಲ್ಲಿವರೆಗೆ ಬರೋಬ್ಬರಿ 50 ಕೋಟಿಗೂ ಅಧಿಕ ಮಂದಿ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಮಹಿಳೆಯರು ಕೂಡ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡುತ್ತಿದ್ದಾರೆ. ಮಹಾ ಕುಂಭಮೇಳದಲ್ಲಿ ಮಹಿಳೆಯರು ಸ್ನಾನ ಮಾಡಿ ಬಟ್ಟೆ ಬದಲಿಸುವುದು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ ಎನ್ನುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಅಷ್ಟೆ ಅಲ್ಲದೆ ಮಹಿಳೆಯರು ಬಟ್ಟೆ ಬದಲಿಸುವ ವಿಡಿಯೋ ಚಿತ್ರೀಕರಣಗಳನ್ನ ಡಾರ್ಕ್​ವೆಬ್ ಗೆ ಅಪ್ಲೋಡ್ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಬಯಲಾಗಿದೆ.

ಪವಿತ್ರವಾದ ಮಹಾ ಕುಂಭಮೇಳದಲ್ಲಿ ಕೆಲ ಕಿಡಿಗೇಡಿಗಳು ಅಪವಿತ್ರ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಸ್ನಾನ ಮಾಡಿ ಬಟ್ಟೆ ಬದಲಿಸುವುದನ್ನ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾರೆ. ಆ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಕ್ರಿಯೇಟ್ ಮಾಡಿರೋ ಕೆಲ ಫ್ರೊಫೈಲ್ಗಳು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಲಾಗುತ್ತಿದೆ. ಡಾರ್ಕ್​ವೆಬ್ ಗೆ ಅಪ್ಲೋಡ್ ಮಾಡುವುದರ ಜೊತೆಗೆ ವಿಡಿಯೋಗಳನ್ನ ಹಣಕ್ಕೆ ಮಾರಾಟ ಮಾಡಲಾಗ್ತಿದೆ. ಈ ಮಾಹಿತಿಯನ್ನ ಉತ್ತರ ಪ್ರದೇಶದ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡ ಬಯಲಿಗೆಳೆದಿದೆ.
ಮಹಿಳೆಯರ ಗೌಪ್ಯತೆ ಹಾಗೂ ಘನತೆ ಉಲ್ಲಂಘನೆಯಾಗಿದೆ. ಮಹಿಳೆಯರ ವಿಡಿಯೋಗಳನ್ನ ಮಾರಾಟ ಮಾಡುವವರು ಹಾಗೂ ಖರೀದಿಸುವವರು ಇಬ್ಬರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಅಂತ ಪೊಲೀಸರು ವಾರ್ನಿಂಗ್ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟರ್ ಸೇರಿದಂತೆ 103 ಸೋಷಿಯಲ್ ಮೀಡಿಯಾ ಫ್ರೊಫೈಲ್ಗಳನ್ನ ಗುರುತಿಸಲಾಗಿದೆ. ಒಟ್ಟು 26 ಸೋಷಿಯಲ್ ಮೀಡಿಯಾ ಅಕೌಂಟ್ ಅಡ್ಮಿನ್ ಗಳ ಮೇಲೆ FIR ದಾಖಲಿಸಲಾಗಿದೆ. ಮಹಿಳೆಯರ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್, ಶೇರ್ ಮಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಪ್ರಶಾಂತ್, ಪ್ರೋಗ್ರಾಮ್ ಪ್ರೊಡ್ಯೂಸರ್

Exit mobile version