ನಿಗೂಢ ಬೇಟೆಗಾರರು ಮತ್ತೆ ಆಕ್ಟಿವ್ ಆಗಿದ್ದಾರೆ. ಅವರ್ ಯಾರು.. ಗೊತ್ತಿಲ್ಲ. ಅವರ ನೆಟ್ ವರ್ಕ್ ಹೇಗಿದೆ.. ಗೊತ್ತಿಲ್ಲ. ಆದರೆ, ಭಾರತಕ್ಕೆ ಬೇಕಾದ ಒಬ್ಬೊಬ್ಬ ಉಗ್ರರನ್ನು ಹುಡುಕಿ ಹುಡುಕಿ ಕೊಲ್ತಿದ್ದಾರೆ. ಭಾರತದಲ್ಲಿ ರಕ್ತದೋಕುಳಿ ಹರಿಸಿದ್ದ ಭಯೋತ್ಪಾದಕರು, ಪಾಕಿಸ್ತಾನದಲ್ಲಿ, ಕೆನಡಾದಲ್ಲಿ, ಇಂಗ್ಲೆಂಡಿನಲ್ಲಿ, ಅಮೆರಿಕದಲ್ಲಿ, ಅಫ್ಘಾನಿಸ್ತಾನದಲ್ಲಿ.. ಹೀಗೆ ಎಲ್ಲೆಂದರೆ ಅಲ್ಲಿ ಮರ್ಡರ್ ಆಗ್ತಿದ್ದಾರೆ. ಆ ನಿಗೂಢ ಬೇಟೆಗಾರರ ಬೇಟೆಗೆ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರ ಹತ್ಯೆಯಾಗಿದ್ಧಾನೆ.
ಅವನ ಹೆಸರು ಅಬ್ದುಲ್ ಕತಾಲ್ ಅಲಿಯಾಸ್ ಕತಾಲ್ ಸಿಂಧಿ. ಲಷ್ಕರ್ ಇ ತೊಯ್ಬಾ ಅನ್ನೋ ಭಯೋತ್ಪಾದಕರ ಗ್ಯಾಂಗಿನ ಚೀಫ್ ಹಫೀಸ್ ಸಯೀದ್ ಅತ್ಯಾಪ್ತ. 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ರಿಯಾಸಿ ಬಾಂಬ್ ಬ್ಲಾಸ್ಟ್, 2023ರಲ್ಲಿ ಶಿವ ಕೋರಿ ದೇವಸ್ಥಾನದ ಸಮೀಪ, ಬಸ್ಸಿಗೆ ಬಾಂಬಿಟ್ಟ ಕೇಸಿನಲ್ಲಿ ಬೇಕಾಗಿದ್ದ ಹಂತಕ ಉಗ್ರ. ಎಂದಿನಂತೆ ಇಬ್ಬರು ಅಪರಿಚಿತ ಬಂದೂಕುಧಾರಿಗಳು ದುತ್ತಂತ ಬಂದು, ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾರೆ. ಅವರು ರಾ ಏಜೆಂಟ್ಸ್ ಅನ್ನೋದು ಒಂದು ಡೌಟು. ಆದರೆ, ಇವನನ್ನ ಕೊಂದ ನಿಗೂಢ ಬೇಟೆಗಾರರು ಪಾಕಿಸ್ತಾನ್ ಸೈನಿಕರ ಯೂನಿಫಾರ್ಮಲ್ಲಿ ಬಂದಿದ್ದರಂತೆ.
ಜಮ್ಮು ಕಾಶ್ಮೀರದ ರಜೌರಿ, ಡಂಗ್ರಿ ಅಟ್ಯಾಕ್ ಕೇಸುಗಳಲ್ಲಿ ಕೂಡಾ ಬೇಕಾಗಿದ್ದ. ಎಲೆಕ್ಷನ್ನುಗಳು ನಡೆಯದಂತೆ ಭಯೋತ್ಪಾದನೆ ಸೃಷ್ಟಿಸ್ತಿದ್ದ ಈ ಅಬ್ದುಲ್ ಕತಾಲ್, ಚಿಕ್ಕಮಕ್ಕಳನ್ನೇ ಕೊಲ್ಲುತ್ತಿದ್ದ. ಮಕ್ಕಳನ್ನು ಕೊಂದರೆ ಜಾಸ್ತಿ ಭಯ ಪಡ್ತಾರೆ ಅನ್ನೋದು ಕತಾಲ್‌ನ ನಂಬಿಕೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ, ಲಷ್ಕರ್ ಇ ತೊಯ್ಬಾ ಕಮಾಂಡರ್ ಆಗಿದ್ದ ಕತಾಲ್‌ಗೆ ಜಮ್ಮು ಕಾಶ್ಮೀರದ ಹಳ್ಳಿ ಹಳ್ಳಿಗಳೂ ಗೊತ್ತಿತ್ತು. ಭಯಾನಕ ಎನ್ನಿಸುವಂತಹ ನೆಟ್ ವರ್ಕ್ ಇತ್ತು. ಆದರೆ ತನ್ನ ಸುತ್ತಲೇ ನಡೆಯುತ್ತಿದ್ದ ನಿಗೂಢ ಬೇಟೆಗಾರರನ್ನ ಗುರುತಿಸೋಕೆ ಫೇಯ್ಲ್ ಆಗಿದ್ದ ಕತಾಲ್, ಪಂಜಾಬ್ ಪ್ರಾಂತ್ಯ ದೀನಾ ಯುನಿವರ್ಸಿಟಿಯ ಹತ್ತಿರ ಜೀನತ್ ಹೋಟೆಲ್ ಅಂತಾ ಇದೆ. ಅಲ್ಲಿ ಕೊಲೆಯಾಗಿ ಹೋಗಿದ್ದಾನೆ.
ನಮ್ಮ ದೇಶದಲ್ಲಿ ನಡೆದ ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಈತ ಬೇಕಾಗಿದ್ದ. ಈತನ ವಿರುದ್ಧ ಒಂದಲ್ಲ..ಎರಡಲ್ಲ.. ಸುಮಾರು ಕೇಸುಗಳಲ್ಲಿ ಚಾರ್ಜ್ ಶೀಟ್ ಹಾಕಿದ್ರು. ಆದರೆ, ಇವನು ನಮ್ಮ ದೇಶದಲ್ಲಿ ಇಲ್ಲ ಅಂತಾ ಪಾಕಿಸ್ತಾನ ಹೇಳ್ಕೊಂಡು ಬರ್ತಾ ಇತ್ತು. ಈಗ ನೋಡಿದ್ರೆ, ಅದೇ ಪಾಕಿಸ್ತಾನದಲ್ಲಿ ಇವನನ್ನ ಯಾರೋ ನಿಗೂಢ ಬೇಟೆಗಾರರು ಬೇಟೆ ಆಡ್ಬಿಟ್ಟಿದ್ದಾರೆ.
ಇತ್ತೀಚೆಗೆ ಅಂದ್ರೆ ಕಳೆದ ಒಂದೆರಡು ವರ್ಷಗಳಲ್ಲಿ ಹಲವು ದೇಶಗಳಲ್ಲಿ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರರು ಕೊಲೆಯಾಗ್ತಿದ್ಧಾರೆ. ಯಾರೋ ಬರ್ತಾರೆ. ಗುಂಡು ಹಾರಿಸ್ತಾರೆ. ಎಸ್ಕೇಪ್ ಆಗ್ತಾರೆ. ಹಾಗೆ ಸತ್ತವರು ಉಗ್ರರು, ಭಾರತಕ್ಕೆ ಬೇಕಾಗಿದ್ದವರು ಅನ್ನೋದೇನೋ ನಿಜ. ಆದರೆ ಸತ್ತ ಉಗ್ರರನ್ನೆಲ್ಲ ಭಾರತದವರೇ ಹೊಡೆದ್ರು, ರಾ ದವರೇ ಕೊಂದು ಹಾಕಿದ್ರು.. ಅನ್ನೋ ಕೂಗು ಇತ್ತೀಚೆಗೆ ಜಾಸ್ತಿ ಆಗ್ತಾ ಇದೆ.
ಆದರೆ ಹಾಗೆ ನಿಗೂಢ ಬೇಟೆಗಾರರ ಬುಲೆಟ್ಟಿಗೆ ಬಲಿಯಾದವರಲ್ಲಿ, ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿದ್ದ ಉಗ್ರರ ಸಂಖ್ಯೆಯೇ ಜಾಸ್ತಿ ಅನ್ನೋದು ಕಾಕತಾಳೀಯ ಎನ್ನಬಹುದಷ್ಟೇ.