ಪಹಲ್ಗಾಮ್ ಭಯೋತ್ಪಾದಕ ದಾಳಿ: ಒಬ್ಬ ಉಗ್ರನ ಫೋಟೋ ಬಿಡುಗಡೆ

27 ಪ್ರವಾಸಿಗರು, ಇಬ್ಬರು ವಿದೇಶಿಗರು ಸೇರಿ ಮೃತ

123 2025 04 23t102606.685

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯಾನಕ ಭಯೋತ್ಪಾದಕ ದಾಳಿಯೊಂದು ನಡೆದಿದ್ದು, ಕಣಿವೆ ರಾಜ್ಯದ ಶಾಂತಿಯುತ ವಾತಾವರಣಕ್ಕೆ ಧಕ್ಕೆ ಉಂಟಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದಲ್ಲಿ ನಡೆದ ಅತ್ಯಂತ ದೊಡ್ಡ ಉಗ್ರ ದಾಳಿಯಾಗಿರುವ ಈ ಘಟನೆಯು ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಬೇಸಿಗೆ ರಜೆಯನ್ನು ಕಳೆಯಲು ಕಾಶ್ಮೀರಕ್ಕೆ ಆಗಮಿಸಿದ್ದ ಪ್ರವಾಸಿಗರನ್ನೇ ಗುರಿಯಾಗಿಸಿ ಈ ದಾಳಿಯನ್ನು ನಡೆಸಲಾಗಿದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಈ ದಾಳಿಯಲ್ಲಿ ಇಬ್ಬರು ವಿದೇಶಿಗರು ಸೇರಿದಂತೆ 27 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಬೆಂಬಲದೊಂದಿಗೆ ಈ ಕೃತ್ಯವನ್ನು The Resistance Front (TRF) ಎಂಬ ಗುಂಪು ತನ್ನ ಹೊಣೆಯಾಗಿ ಒಪ್ಪಿಕೊಂಡಿದೆ.

ADVERTISEMENT
ADVERTISEMENT

ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೈಸರನ್ ಕಣಿವೆಯಿಂದ ಇಳಿದುಬಂದ ಒಟ್ಟು ಎಂಟು ಉಗ್ರರು, ಪ್ರವಾಸಿಗರೊಂದಿಗೆ ಮಾತನಾಡುವ ನೆಪದಲ್ಲಿ ದಾಳಿಯನ್ನು ಆರಂಭಿಸಿದ್ದಾರೆ. ಈ ಗುಂಪಿನಲ್ಲಿ ಇಬ್ಬರು ಸ್ಥಳೀಯ ಉಗ್ರರು ಸೇರಿದ್ದರು. ಎಕೆ-47 ಗನ್‌ಗಳನ್ನು ಬಳಸಿ ದಾಳಿಯನ್ನು ನಡೆಸಿದ ಉಗ್ರರು, ವಿಶೇಷವಾಗಿ ಮುಸ್ಲಿಮೇತರರನ್ನು ಗುರಿಯಾಗಿಸಿದ್ದಾರೆ. “ನೀವು ಹಿಂದೂಗಳಾ?” ಎಂದು ಕೇಳಿ, ಗುರುತಿಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಈ ದಾಳಿಯಲ್ಲಿ ಭಾಗಿಯಾಗಿದ್ದ ಒಬ್ಬ ಭಯೋತ್ಪಾದಕನ ಫೋಟೋ ಇದೀಗ ಬಿಡುಗಡೆಯಾಗಿದೆ. ಆತ ಗನ್ ಹಿಡಿದು ಭೀಕರ ಕೃತ್ಯವೆಸಗುತ್ತಿರುವ ದೃಶ್ಯವನ್ನು ಈ ಚಿತ್ರವು ತೋರಿಸುತ್ತದೆ.

 

Exit mobile version