ಸುನಿತಾ ವಿಲಿಯಮ್ಸ್ ಅತಿ ದೊಡ್ಡ ಚಾಲೆಂಜ್ ಬೇಬಿ ಫೀಟ್: ನಾರ್ಮಲ್ ಆಗೋದು ಎಷ್ಟು ಕಷ್ಟ..?

Befunky collage 2025 03 18t181506.997

ಸುನಿತಾ ವಿಲಿಯಮ್ಸ್ ಭೂಮಿಗೆ ಬರುವುದಕ್ಕೆ ನಡೆಸಿದ ಸರ್ಕಸ್ಸುಗಳು ಒಂದೆರಡಲ್ಲ. ಸುನಿತಾ ವಿಲಿಯಮ್ಸ್ ಭೂಮಿಗೆ ಬರ್ತಾರಾ.. ಅಥವಾ ಅಂತರಿಕ್ಷದಲ್ಲೇ ಇರಬೇಕಾಗುತ್ತಾ ಎಂಬ ಅನುಮಾನದಲ್ಲೇ ಸುನಿತಾ ಭೂಮಿಗೆ ವಾಪಸ್ ಆಗಿ ಆಗಿದೆ. ಕೇವಲ 8 ದಿನದ ಕೆಲಸಕ್ಕೆ ಹೋಗಿದ್ದವರು, 9 ತಿಂಗಳು ಇರಬೇಕಾಯ್ತು. ಈಗ 9 ತಿಂಗಳು ಬಾಹ್ಯಾಕಾಶ ವಾಸ ಮುಗಿಸಿ ಬರುತ್ತಿರುವ ಸುನಿತಾ ವಿಲಿಯಮ್ಸ್ ಭೂಮಿಗೆ ಬಂದ ಮೇಲೆ ನಾರ್ಮಲ್ ಆಗೋಕೆ ತಿಂಗಳುಗಳೇ ಬೇಕು. ಸುನಿತಾಗೆ ಬಾಹ್ಯಾಕಾಶ ವಾಸ ಹೊಸದೇನಲ್ಲ. ಆದರೆ ಆಗ ಹೋಗಿ ಬಂದಾಗ ಇದ್ದ ವಯಸ್ಸು, ದೈಹಿಕ ಸಾಮರ್ಥ್ಯ ಈಗ ಇಲ್ಲ. ಸುನಿತಾ ಅವರಿಗೀಗ 59 ವರ್ಷ.

ಮೊದಲ ಸವಾಲು ಗುರುತ್ವಾಕರ್ಷಣೆ :
ಈ ವಯಸ್ಸಿನಲ್ಲಿ ಭೂಮಿಗೆ ವಾಪಸ್ ಬಂದಾಗ ಸುನಿತಾ ಎದುರಿಸುವ ಅತಿ ದೊಡ್ಡ ಚಾಲೆಂಜ್ ಎಂದರೆ.. ಗುರುತ್ವಾಕರ್ಷಣೆ. ಸುನಿತಾ ಅವರು ಬಾಹ್ಯಾಕಾಶದಲ್ಲಿದ್ದಾಗ ಅವರ ದೇಹದ ರಕ್ತ ಚಲನೆ ಮೇಲ್ಮುಖವಾಗಿತ್ತು. ಮುಖ ಊದಿಕೊಂಡಿರುತ್ತಿದ್ದುದೇ ಆ ಕಾರಣಕ್ಕೆ. ಅಂತಹ ಸುನಿತಾ ವಿಲಿಯಮ್ಸ್, ಭೂಮಿಗೆ ಬಂದ ನಂತರ ಮತ್ತೆ ರಕ್ತ ಚಲನ ಕೆಳಮುಖವಾಗುತ್ತದೆ. ಆ ವೇಳೆ ದೇಹದ ಚರ್ಮದ ಪದರ ಒಡೆಯಲೂ ಬಹುದು. ಅದಕ್ಕೆ ಚಿಕಿತ್ಸೆಗಳಿವೆ.
ಹೃದಯ ಬಡಿತದಲ್ಲಿ ಏರುಪೇರು :
ಎರಡನೆಯ ತೊಂದರೆ ಹೃದಯ ಬಡಿತ. ಸಾಮಾನ್ಯವಾಗಿ ಭೂಮಿಯ ಮೇಲಿನ ಹೃದಯದ ಬಡಿತ ಸರಾಸರಿ 72. ಬಾಹ್ಯಾಕಾಶಕ್ಕೆ ಹೋದಾಗ ಅಂತರಿಕ್ಷದಲ್ಲಿ ಕಡಿಮೆಯಾಗುತ್ತೆ. ನಿಮಿಷಕ್ಕೆ 160 ಬಾರಿ ಮಿಡಿಯಬಹುದು. ಅದನ್ನು ನಾರ್ಮಲ್ಲಿಗೆ ತರೋದು ಒಂದು ಸವಾಲು. ಅಷ್ಟೇ ಅಲ್ಲ, ರಕ್ತದಲ್ಲಿ ಕ್ಯಾಲ್ಸಿಯಂ ಕೊರತೆಯಂತೂ ಕಾಡೇ ಕಾಡುತ್ತೆ. ಇದು ರಕ್ತಕಣಗಳು ದುರ್ಬಲವಾಗುವಂತೆ ಮಾಡುತ್ತೆ. ಕಿಡ್ನಿ ಕೆಲಸ ದುರ್ಬಲವಾಗಿರುತ್ತೆ. ಭೂಮಿಗೆ ಬಂದ ಮೇಲೆ ಅವರಿಗೆ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಕಾಡೋಕೆ ಶುರುವಾಗಬಹುದು.

ADVERTISEMENT
ADVERTISEMENT

ಮೃದುವಾಗುತ್ತವೆ ಸ್ನಾಯುಗಳು :
ಮತ್ತೊಂದು ಚಾಲೆಂಜ್ ಎಂದರೆ, ಸ್ನಾಯ, ಮೂಳೆಗಳನ್ನ ಗಟ್ಟಿ ಮಾಡೋದು. ಬಾಹ್ಯಾಕಾಶದಲ್ಲಿದ್ದಾಗ ಗಗನಯಾತ್ರಿಯ ಸ್ನಾಯು, ಮೂಳೆಗಳ ತಿಂಗಳಿಗೆ ಶೇ.1ರಷ್ಟು ದುರ್ಬಲವಾಗುತ್ತವೆ. ಸುನಿತಾ ಅವರು 9 ತಿಂಗಳು ಇದ್ದು ಬಂದಿದ್ದಾರೆ. ಅಂದ್ರೆ ಅವರ ಮೂಳೆಯ ಶಕ್ತಿ ಶೇ.9ರಿಂದ ಶೇ.10ರಷ್ಟು ದುರ್ಬಲವಾಗಿರುತ್ತವೆ. ಅವುಗಳನ್ನು ರಿಕವರಿ ಮಾಡೋದು ದೊಡ್ಡ ಚಾಲೆಂಜ್. ಅದನ್ನ ಸ್ಪೇಸ್ ಫ್ಲೈಟ್ ಅಸೋಸಿಯೇಟೆಡ್ ನ್ಯೂರೋ-ಆಕ್ಯುಲರ್ ಸಿಂಡ್ರೋಮ್ ಅಂದ್ರೆ ಎಸ್ ಎ ಎನ್ ಎಸ್ ಅಂತ ಕರೀತಾರೆ.
ಅಂತರಿಕ್ಷದಲ್ಲಿ ಯಾವುದಕ್ಕೂ ತೂಕ ಇರೋದಿಲ್ಲ. ಅದಕ್ಕೆ ತಕ್ಕಂತೆ ಅಡ್ಜಸ್ಟ್ ಆಗಿರುವ ದೇಹ, ಭೂಮಿಗೆ ಬಂದಾಗ ಎಷ್ಟು ವೀಕ್ ಆಗಿರುತ್ತದೆ ಎಂದರೆ, ಕುಡಿಯುವ ನೀರಿನ ಗ್ಲಾಸ್ ಎತ್ತಿಕೊಂಡು ನೀರು ಕುಡಿಯೋಕೂ ಆಗಲ್ಲ. ಒಂದು ಪೆನ್ನು, ಪೆನ್ಸಿಲ್ ಎತ್ತಿಡುವಷ್ಟು ಶಕ್ತಿಯೂ ಇರಲ್ಲ. ಅದನ್ನು ರಿಕವರಿ ಮಾಡೋದು ಇನ್ನೊಂದು ದೊಡ್ಡ ಚಾಲೆಂಜ್.
ಬೇಬಿ ಫೀಟ್ ಸವಾಲು :
ಅಂಗಾಲುಗಳು ಎಷ್ಟು ಸ್ಮೂತ್ ಆಗಿರ್ತವೆ ಅಂದ್ರೆ ಬೇಬಿ ಫೂಟ್ ಅಂತಾರಲ್ಲ, ಅಂದ್ರೆ ಪುಟ್ಟ ಮಕ್ಕಳ ಹೆಜ್ಜೆಗಳಿಗಿಂತ ಸ್ಮೂತ್ ಆಗಿರ್ತವೆ. ಅದಕ್ಕೆ ಬೇಬಿ ಫೀಟ್ ಪ್ರಾಬ್ಲಂ ಅಂತಾನೇ ಕರೀತಾರೆ. ಆ ಕಾಲುಗಳಿಗೆ ಶಕ್ತಿ ತುಂಬೋದು ಒಂದೆರಡು ದಿನಗಳಲ್ಲಿ ಆಗುವ ಕೆಲಸ ಅಲ್ಲ. ಕಾಲುಗಳು ವಾಕಿಂಗ್ ಮಾಡೋಕೂ ಆಗದಷ್ಟೂ ಸಾಫ್ಟ್ ಆಗಿರ್ತವೆ. ಒಂದಂತೂ ಸತ್ಯ, ಇನ್ನು ಮುಂದೆ ಭವಿಷ್ಯದಲ್ಲಿ ಸುನಿತಾ ವಿಲಿಯಮ್ಸ್ ಬರಿಗಾಲುಗಳಲ್ಲಿ ನಡೆಯುವುದಕ್ಕೆ ಸಾಧ್ಯವೇ ಇಲ್ಲ ಅಂತಾರೆ ತಜ್ಞರು.
ಹಾಗಾದರೆ ಬಾಹ್ಯಾಕಾಶದಲ್ಲಿರುವವರ ದೇಹವೇ ಸಂಪೂರ್ಣ ಬದಲಾಗಬೇಕಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಬಾಹ್ಯಾಕಾಶದಲ್ಲಿರುವವರು ಪ್ರತಿದಿನ ಕನಿಷ್ಠ ಎರಡು ಗಂಟೆ ವ್ಯಾಯಾಮ ಮಾಡ್ತಾರೆ. ಅದರಿಂದ ಅವರ ದೇಹದ ಶೇಪ್ ಬದಲಾಗದಂತೆ ನೋಡ್ಕೊಳ್ತಾರೆ.
ಪಂಚೇಂದ್ರಿಯಗಳು ಮಾತು ಕೇಳೋದಿಲ್ಲ :
ಅದನ್ನೆಲ್ಲ ಬಿಡಿ, ಕಣ್ಣುಗಳ ದೃಷ್ಟಿಯಲ್ಲಿಯೂ ಬದಲಾವಣೆ ಆಗಿರುತ್ತದೆ. ಅದನ್ನೂ ನಾರ್ಮಲ್ಲಿಗೆ ತರಬೇಕು. ಕಿವಿಗಳಲ್ಲಿನ ಒಳಪದರದ ಮೇಲೆ ಕೂಡಾ ರೇಡಿಯೇಷನ್ ಎಫೆಕ್ಟ್ ಆಗಿರುತ್ತದೆ.
ಇನ್ನು ನಿದ್ರೆ ಬಾರದೇ ಇರುವುದು, ಮೂಡ್ ಚೇಂಜ್ ಆಗುವಂತಹ ಸಮಸ್ಯೆಗಳೂ ಇರುತ್ತವೆ.
ಸಾಮಾನ್ಯವಾಗಿ ಅಂತರಿಕ್ಷಕ್ಕೆ ಹೋಗಿ ಬಂದವರಿಗೆ 45 ದಿನಗಳ ರಿಹ್ಯಾಬಿಟೇಷನ್ ನಡೆಯುತ್ತೆ. ಆದರೆ ಇದು ಸಾಮಾನ್ಯವಾಗಿ ಹೋಗಿ ಬಂದವರಿಗೆ ಮಾತ್ರ. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿದ್ದು ಬಂದಿರೋದು 9 ತಿಂಗಳು. ಇದು ವೈದ್ಯರಿಗೂ ಹೊಸದು.
ಹಾಗಾದರೆ ಇವರನ್ನು ಹೇಗೆ ಟ್ರೀಟ್ ಮಾಡ್ತಾರೆ ಅನ್ನಿಸೋದು ಸಹಜ. ಬಾಹ್ಯಾಕಾಶದಿಂದ ಬಂದವರನ್ನು ತಕ್ಷಣ ಭೂಮಿಯ ವಾತಾವರಣಕ್ಕೆ ಬಿಡೋದಿಲ್ಲ. ಇಲ್ಲಿಯೂ ಕೂಡಾ ಅವರನ್ನು ಬಾಹ್ಯಾಕಾಶದಂತೆಯೇ ಇರುವ ಕಡಿಮೆ ಗುರುತ್ವಾಕರ್ಷಣೆ ಇರುವ ಜಾಗದಲ್ಲಿ ಇರಿಸಿ, ಹಂತಹಂತವಾಗಿ ಗುರುತ್ವಾಕರ್ಷಣೆ ಶಕ್ತಿಯಿರುವ ಪ್ರದೇಶಕ್ಕೆ ಶಿಫ್ಟ್ ಮಾಡ್ತಾರೆ. ಸದ್ಯಕ್ಕೆ ಇರುವ ಮಾಹಿತಿ ಪ್ರಕಾರ ಸುನಿತಾ ವಿಲಿಯಮ್ಸ್ ಅವರು ಭೂಮಿಯ ವಾತಾವರಣಕ್ಕೆ ಶಿಫ್ಟ್ ಆಗುವುದಕ್ಕೇ ಒಂದು ತಿಂಗಳು ಬೇಕು. ಅದಾದ ನಂತರ ಸುಮಾರು 4ರಿಂದ 7 ತಿಂಗಳು ಸಮಯದಲ್ಲಿ ಸುನಿಯಾ ವಿಲಿಯಮ್‌ಸ್ ಮತ್ತು ಬುಚ್ ವಿಲ್ಮೋರ್ ರಿಕವರ್ ಆಗ್ತಾರಂತೆ. ಎಷ್ಟರಮಟ್ಟಿಗೆ ಅವರು ಮತ್ತು ಅವರಿಬ್ಬರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತದೋ.. ಅಷ್ಟು ಬೇಗ ರಿಕವರ್ ಆಗ್ತಾರೆ.

Exit mobile version