ಕೇರಳದ ಕಣ್ಣೂರು ಜಿಲ್ಲೆಯ 18 ವರ್ಷದ ಯುವತಿ ಶ್ರೀನಂದಾ, ತೂಕ ಕಡಿಮೆ ಮಾಡಿಕೊಳ್ಳಲು ಯೂಟ್ಯೂಬ್‌ನಲ್ಲಿ ಹಂಚಲಾದ ಅಪಾಯಕಾರಿ ಡಯಟ್ ಪ್ಲಾನ್ ಅನುಸರಿಸಿ ಪ್ರಾಣ ಕಳೆದುಕೊಂಡಿದ್ದಾಳೆ. ಆಕೆಯು ತೂಕ ಹೆಚ್ಚಾಗುವ ಭಯ ಹೊಂದಿರುವ ಅನೋ ರೆಕಿಯಾ ನರ್ವೋಸಾ ಎನ್ನುವ ಅಸ್ವಸ್ಥತೆ ಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. 5-6 ತಿಂಗಳ ಕಾಲ ತುಂಬಾ ಕಡಿಮೆ ಆಹಾರ ಸೇವಿಸಿ ಹೆಚ್ಚು ಬಿಸಿ ನೀರನ್ನು ಸೇವಿಸಿಕೊಂಡಿದ್ದಳು. ಈ ವಿಷಯವನ್ನು ಕುಟುಂಬದವರಿಂದ ಮುಚ್ಚಿಟ್ಟಿದ್ದಳು.
ವೈದ್ಯರು ತಿಂಗಳ ಹಿಂದೆ ಸರಿಯಾದ ಪೋಷಕಾಂಶದ ಅಗತ್ಯತೆ ಇದೆ ಎಂದು ಹೇಳಿದ್ದರೂ, ಶ್ರೀನಂದಾ ಡಯಟ್ ಮುಂದುವರೆಸಿದಳು. ಆಕೆ ಡಯಟ್ ಮುಂದುವರೆಸಿದ್ದರ ಪರಿಣಾಮ ಆರೋಗ್ಯ ಕ್ಷೀಣಿಸಿ ಪ್ರಾಣ ಕಳೆದುಕೊಂಡಿದ್ದಾಳೆ.
ಕುಟುಂಬವು ಆರಂಭದಲ್ಲಿ ಈ ಸಮಸ್ಯೆಯನ್ನು ಗುಪ್ತವಾಗಿಡಲು ಪ್ರಯತ್ನಿಸಿತು. ಆದರೆ, ಆರೋಗ್ಯ ಹದಗೆಡುವುದರೊಂದಿಗೆ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಶ್ರೀ ನಂದಾ 12 ದಿನಗಳ ಹಿಂದೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ ನಂತರವೂ ಪ್ರಾಣರಕ್ಷೆ ಸಾಧ್ಯವಾಗಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮಗಳು ಹಂಚುವ ಅಸಮತೋಲನ ಆಹಾರ ಪದ್ಧತಿಗಳು ಯುವಜನರಲ್ಲಿ ಹೆಚ್ಚುತ್ತಿರುವ ಆರೋಗ್ಯ ಅಪಾಯಗಳ ಬಗ್ಗೆ ಈ ಘಟನೆ ಎಚ್ಚರಿಕೆ ನೀಡುತ್ತದೆ. ವೈದ್ಯಕೀಯ ಮಾರ್ಗದರ್ಶನವಿಲ್ಲದೆ ಡಯಟ್ ಪ್ಲಾನ್‌ಗಳನ್ನು ಅನುಸರಿಸುವುದು ಅಪಾಯಕಾರಿ ಎಂದು ತಜ್ಞರು ಒತ್ತಿಹೇಳುತ್ತಾರೆ.