ಹೊಸ ವರ್ಷಕ್ಕೆ ಚೀನಾದಿಂದ ಇಡೀ ವಿಶ್ವಕ್ಕೆ ಮತ್ತೊಂದು ಭರ್ಜರಿ ಗಿಫ್ಟ್ ಸಿಗುತ್ತಿದೆ. ಹೌದು. ಚೀನಾದ ಈ ಗಿಫ್ಟ್ 2020 ರ ಹೊಸ ವರ್ಷಕ್ಕೆ ನೀಡಿದ್ದ ಕೊರೊನಾ ವೈರಸ್ಗಿಂತಲೂ ಅಪಾಯಕಾರಿಯಾಗಿದೆ . ಈ ಮೂಲಕ ಚೀನಾ ಮತ್ತೊಮ್ಮೆ ಇಡೀ ಜಗತ್ತನ್ನು ಬೆಚ್ಚಿ ಬೀಳಿಸಲಾಗಿದ್ದೆ .
ಕೋವಿಡ್ 19 ಎನ್ನುವ ಮಹಾಮಾರಿಯ ಹೊಡೆತದಿಂದ ಜಗತ್ತು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ . ಈ ಕೊರೊನಾ ವೈರಸ್ ಯಿಂದ ಲಕ್ಷಾಂತರ ಮಂದಿ ಜೀವ ತೆಗೆದಿದ್ದೆ . ಸಾವಿರಾರು ಕುಟುಂಬವನ್ನು ಬೀದಿಪಾಲು ಮಾಡಿದೆ ಈ ಮಾರಕ ವೈರಸ್ ನೆನಸಿಕೊಂಡರೆ ಜಗತ್ತು ಬೆಚ್ಚಿಬೀಳುತ್ತದೆ . ಕೋವಿಡ್ -19 ಜಗತ್ತಿಗೆ ಹರಡಿ 5 ವರ್ಷಗಳ ಬಳಿಕ ಚೀನಾದಲ್ಲಿ ಮತ್ತೊಂದು ಮಾರಕ ವೈರಸ್ ಪತ್ತೆಯಾಗಿದೆ . ಈ ವೈರಸ್ ಯಿಂದ ಜಗತ್ತಿಗೆ ಹೊಸ ಆತಂಕ ಶುರುವಾಗಿದೆ .
ಚೀನಾ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಈಗ ದೊಡ್ಡ ತಲೆನೋವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ . ಚೀನಾ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವ ಪೋಸ್ಟ್ಗಳು ಈ ವೈರಸ್ ವೇಗವಾಗಿ ಹರಡುತ್ತಿರುವುದನ್ನು ಖಚಿತಪಡಿಸಿದೆ . ಆಸ್ಪತ್ರೆಗಳು ಭರ್ತಿಯಾಗಿದ್ದರೆ ಸ್ಮಶಾನಗಳಲ್ಲಿ ಕೂಡ ಹೆಣಗಳ ಸಂಖ್ಯೆ ಹೆಚ್ಚಿರುವುದನ್ನು ಅನೇಕ ಪೋಸ್ಟ್ಗಳು ತಿಳಿಸಿವೆ.
ಆನ್ಲೈನ್ನಲ್ಲಿ ಹಂಚಿಕೊಂಡಿರುವ ವಿಡಿಯೋಗಳಲ್ಲಿ ರೋಗಿಗಳು ಕಿಕ್ಕಿರಿದು ತುಂಬಿರುವುದನ್ನು ನೋಡಬಹುದು . ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು , ಇನ್ಫ್ಲುಯೆನ್ಸ , ಎ, ಹೆಚ್ಎಂಪಿವಿ, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್-19 ಸೇರಿದಂತೆ ಅನೇಕ ವೈರಸ್ಗಳು ಹರಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ . ವೈರಸ್ ಹರಡುವುದನ್ನು ತಪ್ಪಿಸಲು ಚೀನಾ ತುರ್ತು ಪರಿಸ್ಥಿತಿ ಘೋಷಿಸಿದೆ ಎಂದು ಹೇಳಲಾಗಿದ್ದರೂ ಈ ಸುದ್ದಿ ಇನ್ನೂ ಅಧಿಕೃತವಾಗಿಲ್ಲ . ಹೆಚ್ಎಂಪಿವಿ ಜ್ವರ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎನ್ನಲಾಗಿದೆ . ಇದೂ ಕೂಡ ಕೋವಿಡ್-19 ರೀತಿಯ ರೋಗ ಲಕ್ಷಣಗಳನ್ನು ಹೊಂದಿದೆ , ಈ ವೈರಸ್ ಹರಡುತ್ತಿದ್ದು ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ .
SARS-CoV-2 (Covid-19) ಎಕ್ಸ್ ಹ್ಯಾಂಡಲ್ ಪೋಸ್ಟ್ ಹಂಚಿಕೊಂಡಿದ್ದು, ಚೀನಾದಲ್ಲಿ ಇನ್ಫ್ಲುಯೆನ್ಸಾ ಎ, ಎಚ್ಎಂಪಿವಿ, ಮೈಕ್ರೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್-19 ಸೇರಿದಂತೆ ಅನೇಕ ವೈರಸ್ಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದ್ದು, ಆಸ್ಪತ್ರೆಗಳು ಮತ್ತು ಸ್ಮಶಾನಗಳು ಭರ್ತಿಯಾಗಿದೆ ಎಂದು ಹೇಳಿದೆ .
ಚೀನಾ ರೋಗ ನಿಯಂತ್ರಣ ಪ್ರಾಧೀಕಾರವು ಹೊಸ ರೀತಿ ನ್ಯೂವೋನಿಯಾ ಬಗ್ಗೆ ಅಧ್ಯಯನ ಮಾಡುತ್ತಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ . ಚಳಿಗಾಲದಲ್ಲಿ ಉಸಿರಾಟ ತೊಂದರೆ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ . ಐದು ವರ್ಷದ ಹಿಂದೆ ಕೋವಿಡ್-19 ಹರಡಿದಾಗ ಮೊದಲು ಕಳ್ಳಾಟವಾಗಿದ್ದ ಚೀನಾ ಬಳಿಕ ಇಡೀ ಜಗತ್ತೇ ಬೆಲೆತೆರುವಂತೆ ಮಾಡಿತ್ತು . ಈಗ ಮತ್ತೊಮ್ಮೆ ಅಂತಹ ಸ್ಥಿತಿ ಬರದಂತೆ ನೋಡಿಕೊಳ್ಳಲು ಎಚ್ಚರಿಗೆ ವಹಿಸುವೆ . ಎಲ್ಲಾ ಸಿದ್ಧತೆ ಮಾಡಿಕೊಂಡಿದೆ .
ಚಳಿಗಾಲದಲ್ಲಿ ಚೀನಾದಲ್ಲಿ ಉಸಿರಾಟದ ತೊಂದರೆ ಮಾಡುವ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿರುತ್ತವೆ ಎಂದು ಚೀನಾದ ಅಧಿಕಾರಿ ಕಾನ್ ಬಿಯಾವೊ ಹೇಳಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ . ಆದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಈ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ . ಇತ್ತೀಚೆಗೆ ಪತ್ತೆಯಾದ ಪ್ರಕರಣಗಳಲ್ಲಿ ರೈನೋವೈರಸ್ ಮತ್ತು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ನಂತಹ ರೋಗಕಾರಕಗಳು ಇದರಲ್ಲಿ ಸೇರಿವೆ . ಈ ಕಾಯಿಲೆಗೆ ಲಸಿಕೆ ಇಲ್ಲ, ಆದರೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ .