ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ಬಂದಿದೆ. ನರೇಂದ್ರ್ ಮೋದಿ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಿತ್ರ ಪಕ್ಷಗಳ ಪ್ರಮುಖ ನಾಯಕರೆಲ್ಲರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಈ ಬಾರಿಯು ಗೆಲುವು ಸಾಧಿಸಿರೋ ನಟ ಹಾಗೂ ರಾಜಕಾರಣಿ ರವಿಕಿಶನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗಿದ್ದಾರೆ.
ಹೌದು, ಸಭೆಯಲ್ಲಿ ಭಾಗಿಯಾಗಿದ್ದ ಸಂಸದ ರವಿಕಿಶನ್ ಗುಟಕಾ ಅಗೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲಡೆ ವೈರಲ್ ಆಗಿದೆ. ಸಂಸದರ ಮಧ್ಯೆ ಇದ್ದುಕೊಂಡೆ ಗುಟಕಾ ತಿನ್ನುತ್ತಿರುವ ವಿಡೀಯೋಗೆ ನೆಟ್ಟಿಗರು ಗುಟ್ಖಾ ಚಾಬಾ ದೇಬ್ ರಿಮೋತ್ ಸೆ.. ಎಂದು ಶೀರ್ಷಿಕೆ ಇಟ್ಟು ಟ್ರೋಲ್ ಮಾಡಿದ್ದಾರೆ.
ವಿಡಿಯೋದಲ್ಲಿ ಬಿಳಿ ಬಣ್ಣದ ಬಟ್ಟೆ ತೊಟ್ಟು ಹೆಗಲ ಮೇಲೆ ಶಲ್ಯ ಹಾಕಿಕೊಂಡು ಪ್ರಮುಖ ನಾಯಕರ ಮಧ್ಯೆ ಬಾಯಿ ಆಡಿಸುತ್ತಾ ನಿಂತಿರುವದನ್ನು ನೀವು ಕಾಣಬಹುದು. ಅಷ್ಟಕ್ಕೂ ಅವರು ಗುಟಕಾ ಅಗಿತಾ ಇದ್ರೋ ಇಲ್ಲವೋ ಅನ್ನೋದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸ ವಾಗಿದೆ