ಪ್ರೀತಿ ಪ್ರೇಮ ಬರಿ ಪುಸ್ತಕದ ಬದನೇಕಾಯಿ ಅನ್ನೋ ಮಾತಿದೆ ಆದ್ರೆ, ಇಲ್ಲೊಬ್ಬ ಪ್ರೇಮಿ ತನ್ನ ಗರ್ಲ್ ಫ್ರೆಂಡ್ ಗಾಗಿ ಎಂಥ ರಿಸ್ಕ್ ತಗೊಂಡಿದ್ದಾನೆ ಗೊತ್ತ, ಯುವಕನೊಬ್ಬ ತನ್ನ ಗೆಳತಿಯ ಖರ್ಚಿಗಾಗಿ ಇನ್ನೊಬ್ಬ ವಿದ್ಯಾರ್ಥಿ ಬರೆಯಬೇಕಿದ್ದ ನೀಟ್ ಪರೀಕ್ಷೆಯನ್ನು ಬರೆಯಲು ಹೋಗಿ ಸಿಕ್ಕಿಬಿದ್ದಿದ್ದಾನೆ.ಈ ಘಟನೆ ಉತ್ತರ ಪ್ರದೇಶದ ಡೆಹ್ರಾಡೂನ್ ಅಲ್ಲಿ ನಡೆದಿದ್ದು, ರಾಜಸ್ಥಾನದ ಸರ್ಕಾರಿ ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾದ ದೇವಪ್ರಕಾಶ್ ಈ ಕೃತ್ಯ ಎಸಗಿದ್ದಾನೆ.
ಇತ್ತೀಚಿಗೆ ದೇವಪ್ರಕಾಶ್ ಉತ್ತರಾಖಂಡ ಕೇದಾರನಾಥಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಮಯಾಂಕ್ ಗೌತಮ್ ಎಂಬಾತ ಈತನಿಗೆ ಪರಿಚಯವಾಗುತ್ತಾನೆ. ಹೀಗೆ ಮಾತನಾಡುವ ಹೊತ್ತಿನಲ್ಲಿ ಮಯಾಂಕ್ ತಾನು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಪಾಸ್ ಆಗಬೇಕೆಂಬ ಆಸೆಯನ್ನು ದೇವಪ್ರಕಾಶ್ ಬಳಿ ಹೇಳುತ್ತಾನೆ. ಆದರೆ ಆತ ಅಷ್ಟೇನೂ ಜಾಣ ವಿದ್ಯಾರ್ಥಿಯಾಗಿರದ ಕಾರಣ ತನ್ನ ಈ ಪರೀಕ್ಷೆಯನ್ನು ನೀನು ಬರೆಯಬಹುದೇ ಎಂದು ದೇವಪ್ರಕಾಶ್ ಬಳಿ ಕೇಳಿಕೊಳ್ಳುತ್ತಾನೆ. ಇದಕ್ಕೆ ಪ್ರತಿಯಾಗಿ 2 ಲಕ್ಷ ರೂ. ನೀಡುವುದಾಗಿಯೂ ಕೂಡಾ ಹೇಳುತ್ತಾನೆ.
2 ಲಕ್ಷ ರೂ. ನೀಡಿದರೆ, ಆ ದುಡ್ಡು ತನ್ನ ಗೆಳತಿಯ ಓದಿಗಾಗಿ ಸಹಾಯವಾಗುತ್ತೆ ಎಂಬ ಕಾರಣದಿಂದ ದೇವಪ್ರಕಾಶ್ ನಕಲಿ ವಿದ್ಯಾರ್ಥಿಯಾಗಿ ಬಂದು ಪರೀಕ್ಷೆ ಬರೆಯಲು ಒಪ್ಪಿಕೊಳ್ಳುತ್ತಾನೆ. ಹೀಗೆ ಮಯಾಂಕ್ ಹೆಸರಲ್ಲಿ ಪರೀಕ್ಷೆ ಬರೆಯಲು ಡೆಹ್ರಾಡೂನ್ ನ ರಾಮ್ ರೈ ಪಬ್ಲಿಕ್ ಸ್ಕೂಲ್ ಗೆ ಬಂದ ದೇವಪ್ರಕಾಶ ಬಯೋಮೆಟ್ರಿಕ್ ಚೆಕ್ಕಿಂಗ್ ವೇಳೆ ಸಿಕ್ಕಿಹಾಕಿಕೊಳ್ಳುತ್ತಾನೆ. ತಕ್ಷಣ ಪೊಲೀಸರರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತನ್ನ ಗೆಳತಿಯ ಖರ್ಚಿಗಾಗಿ ಈ ಕೃತ್ಯ ಎಸಗಿರುವುದಾಗಿ ಹೇಳಿಕೆ ನೀಡಿದ್ದಾನೆ.