ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಜೈಲು ಸೇರಿದ್ದ ಸ್ಟಾರ್ ನಟ ಅಲ್ಲು ಅರ್ಜುನ್ ರಿಲೀಸ್ ಆಗಿದ್ದಾರೆ. ಇಂದು ಬೆಳಗ್ಗೆ ಚಂಚಲಗೂಡ ಸೆಂಟ್ರಲ್ ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಯಾಗಿದ್ದಾರೆ. ಇದೇ ವಿಚಾರ ತಿಳಿದ ಕೂಡಲೇ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಹಾಗೂ ಸ್ನೇಹಿತರು ಫುಲ್ ಖುಷ್ ಆಗಿದ್ದಾರೆ. ನಟ ಅಲ್ಲು ಅರ್ಜುನ್ ಮನೆಗೆ ವಾಪಸ್ ಆಗಿದ್ದಾರೆ. ಬನ್ನಿ ಬಿಡುಗಡೆಯಾಗಿ ಮನೆಗೆ ಬರ್ತಿದ್ದಂತೆ ಸಂಬಂಧಿಕರು, ಸಿನಿಮಾ ಸೆಲೆಬ್ರಿಟಿಗಳು ಹಾಗೂ ಹಲವು ಗಣ್ಯರು ನಟನನ್ನು ಭೇಟಿಯಾಗಲು ಅಲ್ಲು ನಿವಾಸಕ್ಕೆ ಬರ್ತಿದ್ದಾರೆ.
ನಟ ಅಲ್ಲು ಅರ್ಜುನ್ ಜೈಲಿನಿಂದ ರಿಲೀಸ್ ಆಗಿ ಮನೆಗೆ ಬರುತ್ತಿದ್ದಂತೆ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಪ್ಪನ ಆಗಮನಕ್ಕೆ ಇಬ್ಬರು ಮಕ್ಕಳು ಕೂಡ ಖುಷಿಯಾಗಿದ್ದಾರೆ. ಅಲ್ಲು ಅರ್ಜುನ್ ಬಿಡುಗಡೆಯಾಗಿ ಮನೆಗೆ ಬರ್ತಿದ್ದಂತೆ ಹಲವು ನಟರು ಹಾಗೂ ರಾಜಕಾರಣಿಗಳು ಹೈದರಾಬಾದ್ನಲ್ಲಿರುವ ಬನ್ನಿ ಮನೆಗೆ ಭೇಟಿ ನೀಡ್ತಿದ್ದಾರೆ.
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಕೂಡ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ರು. ಕೆಲ ಕಾಲ ಬನ್ನಿ ಜೊತೆ ಮಾತುಕತೆ ಕೂಡ ನಡೆಸಿದ್ರು. ಸನ್ ಆಫ್ ಸತ್ಯಮೂರ್ತಿ ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ಉಪ್ಪಿ ಒಟ್ಟಿಗೆ ನಟಿಸಿದ್ದರು.’ಯುಐ’ ಚಿತ್ರದ ಪ್ರಮೋಷನ್ ಗಾಗಿ ಹೈದರಾಬಾದ್ ಗೆ ತೆರಳಿದ್ದ ಉಪೇಂದ್ರ, ಜೊತೆಗೆ ಲಹರಿ ವೇಲು ಅವರು ನಟ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿ ಅಲ್ಲು ಅರ್ಜುನ್ ಮಾತನಾಡಿಸಿ ಬಂದಿದ್ದಾರೆ.ಅಲ್ಲು ಅರ್ಜುನ್ ನಿವಾಸಕ್ಕೆ ನಟ ಚಿರಂಜೀವಿ ಸೇರಿ ಸಿನಿ ದಿಗ್ಗಜರ ತಂಡವೇ ಭೇಟಿ ನೀಡಿದೆ. ಹಲವು ನಟರು ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ.
UI ಚಿತ್ರದ ತೆಲುಗು ವಿತರಣೆ ಹಕ್ಕನ್ನು ಅಲ್ಲು ಅರವಿಂದ್ ಮಾಲೀಕತ್ವದ ಮೈತ್ರಿ ಮೂವಿ ಮೇಕರ್ಸ್ ಖರೀದಿಸಿದೆ. ಹೀಗಾಗಿ ನಟ ಅಲ್ಲು ಅರ್ಜುನ್ ಕೂಡ ಯುಐ ಸಿನಿಮಾಗೆ ಬೆಂಬಲ ನೀಡ್ತಿದ್ದಾರೆ. ಯುಐ ಸಿನಿಮಾ ಪ್ರಚಾರದಲ್ಲು ಬನ್ನಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.