ದೀಪಿಕಾ ಪಡುಕೋಣೆಯ ಮಗಳಿಗೆ 3 ತಿಂಗಳಾಗಿವೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ 2024 ರಲ್ಲಿ ಚಂದದ ಹೆಣ್ಣು ಮಗುವಿಗೆ ಪೋಷಕರಾದರು. ಸೆಪ್ಟೆಂಬರ್ 8 ರಂದು, ದಂಪತಿ ಬಿ-ಟೌನ್ನ ಪೇರೆಂಟ್ಸ್ ಕ್ಲಬ್ಗೆ ಸೇರಿದರು. ಇಬ್ಬರೂ ಪುಟ್ಟ ರಾಜಕುಮಾರಿಯನ್ನು ತಮ್ಮ ಜೀವನದಲ್ಲಿ ಸ್ವಾಗತಿಸಿದರು. ಮಗಳಿಗೆ ಅವರು ದುವಾ ಎಂದು ಹೆಸರಿಟ್ಟರು.
ಇನ್ನು ನಟನೆಯಿಂದ ಅಂತರ ಕಾಯ್ದುಕೊಂಡು ಮಗಳ ಪಾಲನೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇನ್ನೂ ಮೊಮ್ಮಗಳು ದುವಾ ಹುಟ್ಟಿ 3 ತಿಂಗಳಾದ ಖುಷಿಯಲ್ಲಿ ದೀಪಿಕಾ ಅತ್ತೆ ಅಂಜು ಕೂದಲು ದಾನ ಮಾಡಿದ್ದಾರೆ.
ಸೆ.8ರಂದು ಜನಿಸಿದ ದುವಾಗೆಈಗ 3 ತಿಂಗಳು ತುಂಬಿದ ಸಂಭ್ರಮದ ಹಿನ್ನೆಲೆ ರಣ್ವೀರ್ ಸಿಂಗ್ ತಾಯಿ ಕೂದಲು ದಾನ ಮಾಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನನ್ನ ಪ್ರೀತಿಯ ದುವಾ, ನಾನು ನಿಮಗೆ ಮೂರನೇ ತಿಂಗಳ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ. ದುವಾ ಬೆಳವಣಿಗೆಯ ಪ್ರತಿ ತಿಂಗಳು ನಾವು ಆಚರಿಸುತ್ತಿದ್ದೇವೆ. ಇದು ಒಳ್ಳೆಯತನ ಮತ್ತು ದಯೆಯ ಶಕ್ತಿಯನ್ನು ಸಹ ನಮಗೆ ನೆನಪಿಸುತ್ತದೆ. ನನ್ನ ಈ ಸಣ್ಣ ಕೆಲಸವು ಕಷ್ಟದ ಸಂದರ್ಭಗಳನ್ನು ಎದುರಿಸುತ್ತಿರುವ ಕೆಲವು ಜನರಿಗೆ ಉಪಯುಕ್ತವಾಗಲಿದೆ. ಅವರಿಗೆ ಸಾಂತ್ವನ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ. ರಣ್ವೀರ್ ತಾಯಿಯ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಇತ್ತೀಚೆಗೆ ದೀಪಿಕಾ ತನ್ನ ಪುಟ್ಟ ಮಗಳೊಂದಿಗೆ ಬೆಂಗಳೂರಿನ ಪೋಷಕರ ಮನೆಯಲ್ಲಿದ್ದರು. ಆದರೆ ಈಗ ಅವರು ಮುಂಬೈಗೆ ಮರಳಿದ್ದಾಳೆ. ಇತ್ತೀಚಿನ ದಿನಗಳಲ್ಲಿ, ದೀಪಿಕಾ ತನ್ನ ಮಗಳು ದುವಾಗಾಗಿ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಅಂದಹಾಗೆ, ಗಾಯಕ-ನಾಯಕ ದಿಲ್ಜಿತ್ ದೊಸಾಂಜ್ ಬೆಂಗಳೂರಿಗೂ ಬಂದು ಇತ್ತೀಚೆಗೆ ಕಾರ್ಯಕ್ರಮ ಕೊಟ್ಟಿದ್ದರು. ವಿಶೇಷವೆಂದ್ರೆ ಈ ಒಂದು ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಅವರೂ ಭಾಗಿಯಾಗಿದ್ದರು.
ದೀಪಿಕಾ ಪಡುಕೋಣೆ ಕನ್ನಡ ಮಾತ್ ಆಡೋದು ಕಡಿಮೇನೆ ಬಿಡಿ. ಆದರೆ, ದಿಲ್ಜಿತ್ ದೊಸಾಂಜ್ಗೆ ಕನ್ನಡ ಕಲಿಸೋ ಕೆಲಸ ಮಾಡಿದ್ದಾರೆ. ನಾನು ನಿನಗೆ ಪ್ರೀತಿಸ್ತಿನಿ ಅನ್ನೋದನ್ನ ಇಲ್ಲಿ ಹೇಳುತ್ತಾರೆ. ಹಾಗೇನೆ ನಾನು ಕನ್ನಡವನ್ನ ಸ್ಕೂಲ್ ಅಲ್ಲಿ ಓದಿದ್ದೇನೆ ಅಂತಲೂ ಹೇಳ್ತಾರೆ. ಇನ್ನೂ ದೀಪಿಕಾರವರು ಕೆಲ ದಿನಗಳ ಕಾಲ ತವರು ಮನೆ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಮುಂಬೈಗೆ ವಾಪಸ್ ಆಗಿದ್ದಾರೆ.