ನಟಿ ಸಮಂತಾ ಬಗ್ಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ಸಮಂತಾ ಓರ್ವ ಸ್ಟಾರ್ ನಟಿ. ಘಟಾನುಘಟಿ ನಟರೊಂದಿಗೆ ನಟಿಸಿ, ಅನೇಕ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಇದಿಷ್ಟೇ ಅಲ್ಲದೆ, ವೈಯಕ್ತಿಕ ಜೀವನದ ವಿಚಾರದಲ್ಲಿಯೂ ಸಾಕಷ್ಟು ಸುದ್ದಿಯಾಗಿದ್ದಾರೆ. ಸಮಂತಾ ಅವರು ನಟ ನಾಗಚೈತನ್ಯರನ್ನು ಪ್ರೀತಿಸಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೂ ಮೊದಲೇ ಡಿವೋರ್ಸ್ ಘೋಷಣೆ ಮಾಡುವ ಮೂಲಕ ಭಾರಿ ಸುದ್ದಿಯಾದರು.
ಹೊಸ ವಿಷ್ಯ ಏನಪ್ಪಾ ಅಂದ್ರೆ, ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ವೃಷಭ, ಕನ್ಯಾರಾಶಿ ಮತ್ತು ಮಕರ ಸಂಕ್ರಾಂತಿಯ ರಾಶಿಚಕ್ರದ ಚಿಹ್ನೆಗಳಿರುವ 2025ರ ಸಂಭವನೀಯ ಘಟನೆಗಳನ್ನು ಊಹಿಸುವ ಕುತೂಹಲಕಾರಿ Instagram ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ನಟಿ ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಅವರ ಮದುವೆ ಬಗ್ಗೆ ಸುದ್ದಿಗಳು ಶುರುವಾಗಿವೆ. ಹೀಗೆ ಶೇರ್ ಮಾಡಿದ ಪೋಸ್ಟ್ನಲ್ಲಿ 2025ರ ಘಟನೆಗಳಲ್ಲಿ ಆರ್ಥಿಕ ಸ್ಥಿರತೆ ಮತ್ತು ನಿಷ್ಠಾವಂತ ಮತ್ತು ಪ್ರೀತಿಯ ಸಂಗಾತಿಯನ್ನು ಪಡೆಯುವ ಕುರಿತು ಕೂಡಾ ಬರೆದುಕೊಂಡಿದ್ದಾರೆ.
ಸಮಂತಾ ತನ್ನ ಪೋಸ್ಟ್ಗೆ ‘AMEN’ ಪದವನ್ನು ಸೇರಿಸಿದ್ದಾರೆ. ಈ ಭವಿಷ್ಯವಾಣಿಗಳು ನಿಜವಾಗಲಿ ಎನ್ನುವಂತೆ ನಟಿ ಪ್ರಾರ್ಥಿಸಿದ್ದಾರೆ. ಹಾಗಿದ್ದರೆ ಸಮಂತಾ ಸಂಗಾತಿಯನ್ನು ಬಯಸುತ್ತಿದ್ದಾರಾ? ಮರು ಮದುವೆಗೆ ರೆಡಿಯಾಗಿದ್ದಾರಾ?
ಸಂಬಂಧಗಳನ್ನು ಮೀರಿ ಜ್ಯೋತಿಷ್ಯ ಮುನ್ಸೂಚನೆಯು ಗಮನಾರ್ಹ ಸಾಧನೆಗಳು, ಸ್ಥಳಾಂತರ, ಬಹು ಆದಾಯದ ಮಾರ್ಗ, ತಮ್ಮ ಕುಟುಂಬ ಜೀವನದ ಕುರಿತು ತೋರಿಸಿದೆ. ಇಂಥ ಪೋಸ್ಟ್ ಸಮಂತಾ ಶೇರ್ ಮಾಡಿದ್ದು ಮತ್ತಷ್ಟು ಕುತೂಹಲಕಾರಿಯಾಗಿದೆ. ನಟಿ ಹೀಗೊಂದು ಪೋಸ್ಟ್ ಹಾಕ್ತಿದ್ದಂತೆ ಅವರ ಮದುವೆ ಚರ್ಚೆ ಜೋರಾಗಿದೆ.