ಪುಷ್ಪ ‘2’ ಚಿತ್ರ ಬುಧವಾರ (ಡಿಸೆಂಬರ್ 4) ಸಂಜೆಯಿಂದ ಚಿತ್ರಮಂದಿರಗಳಲ್ಲಿ ಸದ್ದು ಮಾಡಲು ಶುರುಮಾಡಿದೆ. ಪ್ರೀಮಿಯರ್ ಶೋಗಳಿಂದಲೇ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಮಧ್ಯೆ ಅಲ್ಲು ಅರ್ಜುನ್ ಅವರ ಮಗ ಅಲ್ಲು ಅಯಾನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಅಪ್ಪನಿಗಾಗಿ ಮಗ ಪತ್ರ ಬರೆದಿದ್ದಾನೆ. ಸ್ವತಃ ಮಗನೇ ಬರೆದ ಪತ್ರವನ್ನು ಪೋಸ್ಟ್ ಮಾಡಿದ್ದಾರೆ ಅಲ್ಲು.ತಮ್ಮ ತಂದೆಯ ಸಾಧನೆಗಳ ಬಗ್ಗೆ ಹೆಮ್ಮೆ ಮತ್ತು ಪ್ರೀತಿಯನ್ನು ಮಗ ಅಯಾನ್ ವ್ಯಕ್ತಪಡಿಸಿರುವ ರೀತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಲ್ಲು ಅಯಾನ್ ಮತ್ತು ಅಲ್ಲು ಆರ್ಹಾ ಇಬ್ಬರೂ ‘ಪುಷ್ಪ 2’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಮುದ್ದಾಗಿ ಮಾತನಾಡಿದ್ದರು. ಈಗ ಅಯಾನ್ ತನ್ನ ಚಿಕ್ಕ ಕೈಗಳಿಂದ ಪತ್ರ ಬರೆದಿದ್ದಾನೆ. ಅದನ್ನು ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗನ ಪತ್ರ ಹೃದಯಸ್ಪರ್ಶಿ ಎಂದು ಬರೆದುಕೊಂಡಿದ್ದಾರೆ. ಅಯಾನ್ ಪತ್ರದಲ್ಲಿ ಏನು ಬರೆದಿದ್ದಾನೆಂದು ನೋಡೋಣ.
“ನಿನ್ನ ಯಶಸ್ಸಿನ ಬಗ್ಗೆ ನನಗೆ ಎಷ್ಟು ಹೆಮ್ಮೆ ಇದೆ ಅಂತ ಹೇಳೋಕೆ ಈ ಪತ್ರ ಬರೀತಿದ್ದೀನಿ ಅಪ್ಪಾ” ಅಂತ ಅಯಾನ್ ಪತ್ರ ಶುರುಮಾಡಿದ್ದಾನೆ. “ಇವತ್ತು ನನಗೆ ತುಂಬಾ ಸ್ಪೆಷಲ್ ಡೇ. ಯಾಕಂದ್ರೆ ಪ್ರಪಂಚದಲ್ಲೇ ಒಬ್ಬ ದೊಡ್ಡ ನಟನ ಸಿನಿಮಾ ರಿಲೀಸ್ ಆಗ್ತಿದೆ. ನನಗೆ ಮಿಶ್ರ ಭಾವನೆಗಳಿವೆ. ‘ಪುಷ್ಪ 2’ ಸಿನಿಮಾ ಮಾತ್ರ ಅಲ್ಲ, ಸಿನಿಮಾ ಮೇಲಿನ ನಿನ್ನ ಶ್ರದ್ಧೆನೂ ತೋರಿಸುತ್ತೆ. ನನ್ನ ಜೀವನದಲ್ಲಿ ನೀನೆಂದೂ ಹೀರೋ ಅಪ್ಪಾ. ನಿನ್ನ ಕೋಟಿ ಅಭಿಮಾನಿಗಳಲ್ಲಿ ನಾನೂ ಒಬ್ಬ” ಅಂತ ಅಯಾನ್ ಭಾವುಕನಾಗಿ ಬರೆದಿದ್ದಾನೆ. “ಪುಷ್ಪ ಅಂದರೆ ಹೂವು ಅಂದುಕೊಂಡಿದ್ದೀರಾ? ಅದು ಬೆಂಕಿ. ಎಂದು ಬರೆದಿದ್ದಾನೆ. ಈ ಸಿನಿಮಾಗಾಗಿ ಅಲ್ಲು ಅರ್ಜುನ್ ನೀಡಿದ ಸಮಯ, ಸಮಪರ್ಣೆ ಬಗ್ಗೆ ಹೆಮ್ಮೆ ಆಗುತ್ತಿದೆ ಎಂದು ಚಿತ್ರತಂಡಕ್ಕೆ ವಿಶ್ ಮಾಡಿದ್ದಾನೆ ಅಯಾನ್.
ಅಲ್ಲು ಅರ್ಜುನ್ ಈ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದು, “ನನ್ನ ಮಗ ಅಯಾನ್ ಪತ್ರ ನನ್ನ ಹೃದಯ ಮುಟ್ಟಿದೆ. ಇದುವರೆಗಿನ ನನ್ನ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ಅಂತಹ ಪ್ರೀತಿಯನ್ನು ಹೊಂದಲು ನಾನು ತುಂಬಾ ಅದೃಷ್ಟಶಾಲಿ. ಅವನು ಇನ್ನೂ ಚಿಕ್ಕವನಾಗಿದ್ದರಿಂದ ಕೆಲವು ಉತ್ಪ್ರೇಕ್ಷೆಗಳ ಮಾತಿಗೂ ಕ್ಷಮೆ ಇರಲಿ ಎಂದು ಬರೆದುಕೊಂಡಿದ್ದಾರೆ.
ನಟ ಮತ್ತು ತಂದೆಯಾಗಿ ಅಲ್ಲು ಅರ್ಜುನ್ ತುಂಬ ಗ್ರೇಟ್ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಮತ್ತೊಂದು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ನಟ ವಿಜಯ್ ದೇವರಕೊಂಡ ಉಡುಗೊರೆಯಾಗಿ ನೀಡಿದ ಡೆನಿಮ್ ಜಾಕೆಟ್ ಅನ್ನು ಧರಿಸಿರುವ ಚಿತ್ರವನ್ನು ಅಲ್ಲು ಅರ್ಜುನ್ ಹಂಚಿಕೊಂಡಿದ್ದಾರೆ.
ವಿಜಯ್ ಅವರ ಬಟ್ಟೆ ಬ್ರ್ಯಾಂಡ್ ರೌಡಿಯ ಜಾಕೆಟ್ ಹಿಂಭಾಗದಲ್ಲಿ “ಪುಷ್ಪಾ” ಎಂಬ ಪದವನ್ನು ಹೊಂದಿದೆ. ಕನ್ನಡಿಯ ಮುಂದೆ ತನ್ನ ಸಹಿ ಸ್ಟೈಲಿಶ್ ಅವತಾರದಲ್ಲಿ ನಿಂತ ಅಲ್ಲು ಅರ್ಜುನ್ ವಿಜಯ್ ಅವರಿಗೆ ಧನ್ಯವಾದ ಅರ್ಪಿಸುತ್ತಾ, “ಧನ್ಯವಾದ ನನ್ನ ಸ್ವೀಟೆಸ್ಟ್ ಬ್ರದರ್ ಎಂದು ಬರೆದುಕೊಂಡಿದ್ದಾರೆ.ಸುಕುಮಾರ್ ನಿರ್ದೇಶನದ ಮತ್ತು ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಸಹ-ನಟರಾಗಿ, ಪುಷ್ಪ: ದಿ ರೂಲ್ ಡಿಸೆಂಬರ್ 5 ರಂದು ಬಿಡುಗಡೆಯಾಗಿದೆ.
ಸಿನಿಮಾದಲ್ಲಿ ಫೈಟ್ ಸೀನ್ ಗಳು, ಹಾಡಿನ ದೃಶ್ಯ, ಡೈಲಾಗ್ ಗಳು ಹಾಗೂ ಪುಷ್ಪ ಎಂಟ್ರಿಯಂತಹ ಸೀನ್ ಗಳು ಟ್ವಿಟರ್, ಫೇಸ್ ಬುಕ್, ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ.ಸುಕುಮಾರ್ ರೆಡ್ವುಡ್ ಸ್ಮಗ್ಲಿಂಗ್ ಜೊತೆ ಪುಷ್ಪ 2ನಲ್ಲಿ ಮತ್ತೊಂದು ಸೈಡ್ ಸ್ಟೋರಿಯನ್ನು ಹೇಳಿದ್ದಾರೆ. ಪುಷ್ಪ ದಿ ರೈಸ್ನ ಮುಂದುವರಿದ ಭಾಗವಾಗಿ ಪುಷ್ಪ 2ನಲ್ಲಿ ಕೂಡಾ ರಕ್ತಚಂದನದ ಕಳ್ಳ ಸಾಗಣೆ ಕಥೆ ಇದೆ.
ಸಾಮಾನ್ಯ ಪ್ರೇಕ್ಷಕರಿಗೆ ಹಬ್ಬದೂಟದಂತೆ ಸುಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲು ಅರ್ಜುನ್ ಪ್ರತಿ ದೃಶ್ಯಕ್ಕೂ ಪ್ರಾಣಪಣವಾಗಿ ಅಭಿನಯಿಸಿದ್ದಾರೆ. ಬನ್ನಿ ಅವರ ಶ್ರದ್ಧೆಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಚಿತ್ರತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.