ಬಿಗ್ ಬಾಸ್ ಸೀಸನ್ 11ರ ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಉಗ್ರಂ ಮಂಜು ಹಾಗೂ ಗೌತಮಿ ಅವರಿಗೆ ಬೆವರು ಇಳಿಸಿದ್ದಾರೆ ಕಿಚ್ಚ. ಈ ವಾರ ಮನೆಯಲ್ಲಿ ರಾಜನ ಆಡಳಿತವಿತ್ತು. ಈ ವೇಳೆ ಉಗ್ರಂ ಮಂಜು ಅವರು ಪಕ್ಷಪಾತ ಮಾಡಿದ್ದರು. ಇನ್ನೂ ವಿಶೇಷ ಅಂದರೆ ಉಗ್ರಂ ಮಂಜು ಅವರು ತಮ್ಮ ಗೆಳತಿಯಾಗಿರುವ ಗೌತಮಿ ಅವರ ಪರವಾಗಿ ಆಟ ಆಡಿದ್ದಾರೆ. ಮಂಜು ಅವರು ಗೌತಮಿಯವರ ವಿಷಯದಲ್ಲಿ ಕಟುಕ ಮಹಾರಾಜನಾಗಿ ಇರಲಿಲ್ಲ. ಉಳಿದ ಎಲ್ಲಾ ಸದಸ್ಯರೊಂದಿಗೆ ಕಟುಕ ಮಹಾರಾಜನಾಗಿ ಇದ್ದರು. ಈ ಬಗ್ಗೆ ಕಿಚ್ಚ ಸುದೀಪ್ ಅವರು ಮಾಸ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯ ಸಾಮ್ರಾಜ್ಯದಲ್ಲಿ ಮಹಾರಾಜರಾಗಿದ್ದ ಮಂಜಣ್ಣ ಹಾಗೂ ಯುವರಾಣಿ ಮೋಕ್ಷಿತಾ ಅವರ ಮಧ್ಯೆ ಬಿಗ್ ಫೈಟ್ ನಡೆದಿತ್ತು. ಟಾಸ್ಕ್ನ ಹೊರೆತುಪಡಿಸಿ ಈ ಇಬ್ಬರು ಪರ್ಸನಲ್ ಆಗಿ ತಮ್ಮ ಆಟವನ್ನು ಪ್ರದರ್ಶಿಸಿದ್ದರು. ಈ ಪರ್ಸನಲ್ ವಿಚಾರವನ್ನ ಕಿಚ್ಚ ಸುದೀಪ್ ಅವರು ವಾರದ ಕತೆಯಲ್ಲಿ ಪ್ರಶ್ನಿಸಿದ್ದಾರೆ.
ಮಂಜಣ್ಣ ಮೇಲೆ ಮೋಕ್ಷಿತಾ ಅವರು ಪರ್ಸನಲ್ ಆಗಿ ಜಿದ್ದಿಗೆ ಬೀಳಲು ಕಾರಣವೇನು? ಇದೇ ಪ್ರಶ್ನೆಯನ್ನ ಕಿಚ್ಚ ಸುದೀಪ್ ಅವರು ಕೇಳಿದಾಗ ಮೋಕ್ಷಿತಾ ಅವರು ನೇರವಾಗಿ ಉತ್ತರ ನೀಡಿದ್ದಾರೆ. ಕೆಲವೊಂದು ಅವರ ಮಾತುಗಳು ನನಗೆ ನೋವಾಗುವಂತೆ ಮಾಡಿದೆ. ನನಗೆ ಹರ್ಟ್ ಆದ ಮೇಲೆ ನಾನು ಆ ರೀತಿ ರಿಯಾಕ್ಟ್ ಮಾಡೋದಕ್ಕೆ ಶುರು ಮಾಡಿದೆ ಎಂದು ಮೋಕ್ಷಿತಾ 2 ಕಡ್ಡಿ 1 ತುಂಡು ಮಾಡಿದಂತೆ ಹೇಳಿದ್ದಾರೆ.
ಮಂಜಣ್ಣ ಹಾಗೂ ಮೋಕ್ಷಿತಾ ಅವರ ಜಗಳದ ಮಧ್ಯೆ ಗೌತಮಿ ಕೂಡ ತುಪ್ಪ ಸುರಿದಿದ್ದಾರೆ. ಬಿಗ್ ಬಾಸ್ ಟಾಸ್ಕ್ನಲ್ಲಿ ಯುವರಾಣಿಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು ಅಂತ ಹೇಳಿದಾಗ ಗೌತಮಿ ಅವರು ನಿರಾಕರಿಸುತ್ತಾರೆ. ಗೌತಮಿ ಅವರು ಈ ರೀತಿ ನಡೆದುಕೊಂಡಿದ್ದು ಯಾಕೆ ಎಂದು ಪ್ರಶ್ನಿಸಲಾಗಿದೆ.
ಈ ಬಗ್ಗೆ ಉಗ್ರಂ ಮಂಜು ಅವರನ್ನು ಕಿಚ್ಚ ಸಖತ್ ಆಗಿಯೇ ಕ್ಲಾಸ್ ತೆಗೆದುಕೊಂಡರು. ಬೇರೆ ಅವರಿಗೆ ಹೇಗೆ ನೀವು ಆದೇಶ ಕೊಡೋತ್ತೀರೋ ಅದೇ ರೀತಿ ಗೌತಮಿ ಅವರಿಗೂ ಹೇಳಬೇಕಿತ್ತು. ಪ್ರಜೆ ಮಾತಾಡ್ತಾ ಇದ್ದರೆ, ಗೌತಮಿ ಮಾತಾಡ್ತಾ ಇದ್ದರು. ಮೊದಲು ಸಂಬಂಧ, ಸಂಬಂಧ ಅಂತೀರಾ, ಆಮೇಲೆ ನನಗೆ ಮೋಸ ಆಯ್ತು. ಅಂತೀರಾ. ನಂಬಿಕೆ ದ್ರೋಹ ಅಂತೀರಾ. ಯಾರು ಹೇಳಿದ್ರು ನಂಬಿ ಅಂತಾ? ಕಿಚ್ಚ ಮಾಸ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.