ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್ ಸ್ಪರ್ಧೆ ಜೋರಾಗಿದೆ. ಹನುಮಂತ ಹಾಗೂ ಗೌತಮಿ ನೇತೃತ್ವದಲ್ಲಿ ಎರಡು ತಂಡಗಳಾಗಿ ವಿಭಾಗಿಸಿದ್ದು, ನಾಯಕನ ಆಯ್ಕೆಯ ಪ್ರಕ್ರಿಯೆಗಳು ಜಾರಿಯಲ್ಲಿವೆ. ಈ ಮಧ್ಯೆ ಅವಕಾಶಕ್ಕಾಗಿ ಚೈತ್ರಾ ಕುಂದಾಪುರ ಸಣ್ಣ ಮಕ್ಕಳಂತೆ ಕಣ್ಣೀರು ಇಟ್ಟಿದ್ದಾರೆ.
ದೊಡ್ಮನೆಯಲ್ಲಿ ಒಂದು ಪದ ಹೆಚ್ಚು ಬಳಕೆ ಆಗುತ್ತಿದೆ. ‘ಕುಗ್ಗಿಸ್ತಾರೆ’ ಅನ್ನೋದೇ ಆ ಪದ ಆಗಿದೆ. ಆ ದಿನ ಉಗ್ರಂ ಮಂಜು ವಿರುದ್ಧ ಮೋಕ್ಷಿತಾ ಪೈ ಹೇಳಿದ್ದರು. ಮಂಜಣ್ಣ ಮಾನಸಿಕವಾಗಿ ಕುಗ್ಗಿಸ್ತಾರೆ ಅಂತ ಹೇಳಿದ್ದರು. ಇದೇ ಮಂಜಣ್ಣನ ವಿರುದ್ಧ ಐಶ್ವರ್ಯ ಸಿಂಧೋಗಿ ಕೂಡ ಹೇಳಿದ್ದರು. ನನ್ನ ಕುಗ್ಗಿಸೋಕೆ ಬರಬೇಡಿ. ನಾನು ಕುಗ್ಗೋ ಮಗಳೇ ಅಲ್ಲ ಅಂತಲೇ ಹೇಳಿದ್ದರು. ಆದರೆ, ಇದೀಗ ಗಟ್ಟಿಗಿತ್ತಿ ಚೈತ್ರಾ ಕುಂದಾಪುರ ಈ ಒಂದು ಪದ ಬಳಕೆ ಮಾಡಿದ್ದಾರೆ. ನನ್ನ ಮಾನಸಿಕವಾಗಿ ಕುಗ್ಗಿಸ್ತಾರೆ ಅನ್ನೋದನ್ನ ಹೇಳಿಕೊಂಡಿದ್ದಾರೆ.
ಕ್ಯಾಪ್ಟನ್ ಗೌತಮಿ ತಂಡದಲ್ಲಿರುವ ಚೈತ್ರಾ ಕುಂದಾಪುರಗೆ ಆಡಲು ಅವಕಾಶ ಸಿಗುತ್ತಿಲ್ಲ ಅನ್ನೋದು ಆರೋಪವಾಗಿದೆ. ನಿನ್ನೆ ನಡೆದ ಒಂದು ಪಂದ್ಯದಲ್ಲಿ ಗೌಮಿ ತಂಡದ ಪರ ಚೈತ್ರಾ ಹಾಗೂ ಮಂಜು ಆಡಿದ್ದರು. ಚೈತ್ರಾ ಹಾಗೂ ಮಂಜು ಜೋಡಿ ಸೋಲನ್ನು ಕಂಡಿದೆ. ನಂತರದ ಗೇಮ್ಗೆ ಚೈತ್ರಾ ಅವರನ್ನು ಉಸ್ತುವಾರಿಯಾಗಿ ಗೌತಮಿ ನೇಮಕ ಮಾಡಿದ್ದರು.
ಇದಕ್ಕೆ ಬೇಸರಗೊಳ್ಳುವ ಚೈತ್ರಾ, ನನಗೆ ಆಡಕ್ಕೆ ಕೊಡಲ್ಲ. ಉಸ್ತುವಾರಿ ಮಾಡಲ್ಲ ಅಂತಿನಿ, ನನಗೆ ಅದನ್ನೇ ಕೊಡ್ತಾರೆ. ಕಳೆದ ವಾರ ಎಲಿಮಿನೇಟ್ ಆಗಿ ವಾಪಸ್ ಬಂದಿದ್ದೀನಿ. ಇಡೀ ವಾರ ಆಟ ಆಡಿಲ್ಲ. ಆಡ್ತೀನಿ ಅಂದರೆ ಆಡಕ್ಕೆ ಕೊಡಲ್ಲ. ಆಮೇಲೆ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಅಂತಾರೆ ಎನ್ನುತ್ತ ಕಣ್ಣೀರು ಇಟ್ಟಿದ್ದಾರೆ.
ನಂತರ ನಡೆದ ಟಾಸ್ಕ್ನಲ್ಲೂ ಮತ್ತೆ ಗೌತಮಿ ತಂಡ ಸೋಲನ್ನು ಕಂಡಿದೆ. ಹೀಗಾಗಿ ಬಿಗ್ಬಾಸ್, ನಿಮ್ಮ ತಂಡದಿಂದ ಕ್ಯಾಪ್ಟನ್ಸಿ ರೇಸ್ನಿಂದ ಒಬ್ಬರನ್ನು ಹೊರಗೆ ಇಡಬೇಕು ಎನ್ನುತ್ತಾರೆ. ಆಗ ಗೌತಮಿ ಚೈತ್ರಾ ಹೆಸರನ್ನು ತೆಗೆದುಕೊಂಡಿದ್ದಾರೆ. ಇದು ಚೈತ್ರಾ ಕುಂದಾಪುರಗೆ ಸಹಿಸಲಾರ ಸಂಕಟ ಆಗಿದೆ. ಹೀಗಾಗಿ ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್ನಲ್ಲಿ ಏನೆಲ್ಲಾ ಡ್ರಾಮಗಳು ನಡೆಯುತ್ತವೆ ಎಂದು ತಿಳಿದುಕೊಳ್ಳಲು ವೀಕ್ಷಕರು ಎಕ್ಸೈಟ್ ಆಗಿದ್ದಾರೆ.