ಬಿಗ್ಬಾಸ್ ಮನೆಯಲ್ಲಿ ಉತ್ತಮ ಮತ್ತು ಕಳಪೆ ಚಟುವಟಿಕೆಗಳು ನಡೆದಿವೆ. ಈಗಾಗಲೇ ಅನೇಕ ಬಾರಿ ಬಿಗ್ಬಾಸ್ ಮನೆಯ ಜೈಲು ಸೇರಿದ್ದ ಚೈತ್ರಾ ಕುಂದಾಪುರ ಮತ್ತೆ ಕಂಬಿ ಹಿಂದೆ ಹೋಗಿದ್ದಾರೆ.ಪ್ರತಿ ವಾರ ಚೈತ್ರಾ ಅವರು ಕಳಪೆ ಪಡೆದು ಜೈಲಿಗೆ ಹೋಗುತ್ತಲೇ ಇದ್ದಾರೆ.
ಈ ವಾರ ಉಸ್ತುವಾರಿಯಲ್ಲಿ ಚೈತ್ರಾ ಪಕ್ಷಪಾತ ಮಾಡಿದರು ಎಂಬ ಕಾರಣಕ್ಕೆ ಹಲವರು ಕಳಪೆಯನ್ನು ಕೊಟ್ಟರು. ಇನ್ನು ಈ ಬಗ್ಗೆ ಚೈತ್ರಾ ಅವರು ಗುಂಪು ಕಟ್ಟಿಕೊಂಡು ಕಳಪೆ ನೀಡುತ್ತೀದ್ದೀರಾ ಎಂದು ವಾದಿಸಿದರು. ಈ ಬಗ್ಗೆ ಹನುಮಂತ ಕೂಡ ಸ್ವಲ್ಪ ಗರಂ ಆಗಿ, ನಿನಗೆ ಪದೇ ಪದೇ ಕಳಪೆ ಕೊಡೋಕೆ ನೀನೇನು ದೊಡ್ಡಮ್ಮ ಮಗಳಲ್ಲ ,ಅತ್ತೆ ಮಗಳು ಅಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ.
ಇನ್ನು ಧನರಾಜ್ ಹಾಗೂ ಮೋಕ್ಷಿತಾ ಅವರು ಕೂಡ ಪಕ್ಷಪಾತ ವಿಚಾರವಾಗಿ ಕಳಪೆ ಕೊಟ್ಟರು. ಕುಣಿಯಕ್ಕೆ ಬಾರದೇ ಇರೋನು ನೆಲ ಡೊಂಕು ಇದ್ದಾಗೆ, ಆಡಕ್ಕೆ ಬರದೇ ಇದ್ದವನು ಸೋತೆ ಅಂತ ನಾನು ಹೇಳಲ್ಲ ಎಂದಿದ್ದಾರೆ ಚೈತ್ರಾ. ಇನ್ನು ರಜತ್ ಕೂಡ ಮುಂದಿನ ದಿನಗಳಲ್ಲಿ ನೀವು ಉಸ್ತುವಾರಿ ಆಗಿ ಬಂದರೆ ನಮ್ಮ ತಂಡ ನಿಮಗೆ ಕೈ ಮುಗಿಯುತ್ತೆ ಎಂದಿದ್ದಾರೆ.
ಇನ್ನು ಮುಂದಿನ ವಾರಕ್ಕೆ ಯಾರು ನಾಯಕರಾಗುತ್ತಾರೆ ಅನ್ನೋದು ಕೂಡ ರಿವೀಲ್ ಆಗಿದೆ. ಆದರೆ ಬಿಗ್ಬಾಸ್ ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ. ಭವ್ಯ ಗೌಡ ಬಿಗ್ಬಾಸ್ ಮನೆಗೆ ಕ್ಯಾಪ್ಟನ್ ಆಗಿದ್ದಾರೆ.