ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರಿಗೆ ಜಾಮೀನು ಸಿಕ್ಕಿದೆ. ಇದೇ ವೇಳೆ ಅನುಕುಮಾರ್, ಜಗದೀಶ್, ನಾಗರಾಜು, ಲಕ್ಷ್ಮಣ್ ಮತ್ತು ಪ್ರದೋಷ್ ಅವರಿಗೂ ಜಾಮೀನು ಸಿಕ್ಕಿತ್ತು. ಬೇಲ್ ಮೇಲೆ ದರ್ಶನ್ ಮತ್ತು ಪವಿತ್ರಾ ಗೌಡ ಹೊರಬಂದಿದ್ದಾರೆ. ಆದರೆ ಜಗದೀಶ್ ಮತ್ತು ಅನುಕುಮಾರ್ ಅವರಿಗೆ ಜಾಮೀನಿಗೆ ಶ್ಯೂರಿಟಿ ಒದಗಿಸುವುದೇ ಸಮಸ್ಯೆ ಆಗಿತ್ತು. ಇದೀಗ ಆರೋಪಿ ಜಗದೀಶ್ಗೆ ಕೊನೆಗೂ ಶ್ಯೂರಿಟಿ ಸಿಕ್ಕಿದ್ದು, ಶಿವಮೊಗ್ಗ ಜೈಲಿಂದ ಜಗದೀಶ್ ರಿಲೀಸ್ ಆಗಿದ್ದಾರೆ.
ಆದರೆ, ಜಗದೀಶ್ಗೆ ಕೋರ್ಟ್ ಪ್ರಕ್ರಿಯೆ ಪೂರ್ಣವಾಗದ ಕಾರಣ ಜೈಲಿನಿಂದ ಬಿಡುಗಡೆ ತಡವಾಗಿತ್ತು.ಬುಧವಾರ ಬೆಳಗ್ಗೆ ಬೆಂಗಳೂರಿನ ಕೋರ್ಟ್ನಲ್ಲಿ ಜಾಮೀನು ಪ್ರಕ್ರಿಯೆ ಮುಗಿದಿದ್ದರಿಂದ ಸಂಜೆ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಜಗದೀಶ್ ಬಿಡುಗಡೆಯ ಪತ್ರ ಇಮೇಲ್ನಲ್ಲಿ ಬಂದ ಕಾರಣಕ್ಕೆ ಸಂಜೆಯೇ ಜಗದೀಶ್ ಅವರನ್ನು ಬಿಡುಗಡೆ ಮಾಡಲಾಯಿತು.
ಎ6 ಆಗಿದ್ದ ಜಗದೀಶ್ ನನ್ನು ಆಗಸ್ಟ್ 29ರಂದು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಚಿತ್ರದುರ್ಗದ ಆಟೋ ಡ್ರೈವರ್ ಜಗದೀಶ್, ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ರು ಎನ್ನಲಾಗ್ತಿದೆ. ಜೈಲಿಂದ ರಿಲೀಸ್ ಆದ ಜಗದೀಶ್ನನ್ನು ಆತನ ಸಹೋದರಿ ಕಾರಿನಲ್ಲಿ ಕರೆದೊಯ್ದು. ರಿಲೀಸ್ ಆದ ಜಗದೀಶ್, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.