ಕನ್ನಡದ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಸದ್ಯ ಕೆನಡಾದಲ್ಲಿಯೇ ಇದ್ದಾರೆ. ತಮ್ಮ 45 ಚಿತ್ರದ CG ಕೆಲಸದಲ್ಲಿಯೇ ಮಗ್ನರಾಗಿದ್ದಾರೆ. ಎಲ್ಲ ಬಿಟ್ಟು ಕೆನಡಾಕ್ಕೆ ಹೋಗಲು ಏನು ಕಾರಣ ಏನು ಅನ್ನೋ ಪ್ರಶ್ನೆ ಕೂಡ ಇದೆ. ಆದರೆ, ಈ ಚಿತ್ರದ ಮೂಲಕ ಅರ್ಜುನ್ ಜನ್ಯ ಇನ್ನೂ ಒಂದು ದೊಡ್ಡ ಸಾಹಸವನ್ನೆ ಮಾಡಿದ್ದಾರೆ. ತಮ್ಮ 45 ಚಿತ್ರದ ಮೂಲಕವೇ ಹಾಲಿವುಡ್ ಟೆಕ್ನಿಷನ್ಗಳನ್ನ ಕನ್ನಡಕ್ಕೂ ಕರೆತಂದಿದ್ದಾರೆ. ಇದರೊಟ್ಟಿಗೆ ಫಸ್ಟ್ ಟೈಮ್ ಇಂಡಿಯನ್ ಸಿನಿಮಾಕ್ಕೆ ಹಾಲಿವುಡ್ನ ಟೆಕ್ನಿಷನ್ ಕೆಲಸ ಮಾಡ್ತಿರೋದು ವಿಶೇಷ ಆಗಿದೆ.
ಹಾಲಿವುಡ್ನ ಹಲವು ಸಿನಿಮಾಗಳಿಗೆ ವಿಎಫ್ಎಕ್ಸ್ ಮತ್ತು ಗ್ರಾಫಿಕ್ಸ್ ಕೆಲಸ ಮಾಡಿರುವ ಮಾರ್ಜ್ ಅನ್ನು ಸಂಪರ್ಕ ಮಾಡಿರುವ ಅರ್ಜುನ್ ಜನ್ಯ. ’45’ ಸಿನಿಮಾದ ವಿಎಫ್ಎಕ್ಸ್ ಕೆಲಸವನ್ನು ಸಂಸ್ಥೆಯ ನುರಿತ ತಂತ್ರಜ್ಞರಾದ ಮಿಸ್ಟರ್ ರಾಫೆಲ್ ಹಾಗೂ ಮಿಸ್ಟರ್ ಜಸ್ಟಿನ್ ಅವರು ಮಾಡಲಿದ್ದಾರೆ.
ಹಾಲಿವುಡ್ನ ಜನಪ್ರಿಯ ಸಿನಿಮಾಗಳಾದ ‘ಆಂಟ್ಮ್ಯಾನ್’, ‘ವಾಂಡಾ ವಿಷನ್’, ‘ಮೂನ್ ಲೈಟ್’, ‘ವೆಡ್ನಸ್ ಡೇ’, ‘ಸ್ಟೇಂಜರ್ ಥಿಂಗ್ಸ್ 4’, ‘ಫ್ಯಾಂಟಸಿ ಐಲೆಂಡ್’, ‘ಸ್ಪೈಡರ್ ಮ್ಯಾನ್ ನೋ ವೇ ಹೋಮ್’ ಇನ್ನೂ ಹಲವಾರು ಇಂಗ್ಲೀಷ್ ಸಿನಿಮಾ ಹಾಗೂ ವೆಬ್ ಸರಣಿಗಳಿಗೆ ಈ ಸಂಸ್ಥೆ ಕೆಲಸ ಮಾಡಿದೆ.
ಅರ್ಜುನ್ ಜನ್ಯ ತಮ್ಮ ಚಿತ್ರ ಜೀವನದಲ್ಲಿ ಫಸ್ಟ್ ಟೈಮ್ ನಿರ್ದೇಶನ ಮಾಡಿದ್ದಾರೆ. ಶಿವಣ್ಣ, ರಾಜ್ ಬಿ ಶೆಟ್ಟಿ, ಉಪೇಂದ್ರ ಅಭಿನಯದ 45 ಚಿತ್ರದ ಮೂಲಕವೇ ಡೈರೆಕ್ಟರ್ ಆಗಿದ್ದಾರೆ. ಅನಿಮೇಷನ್ ಬಳಸಿಕೊಂಡು ಚಿತ್ರೀಕರಣ ಮುಂಚೇನೆ ಇಡೀ ಸಿನಿಮಾವನ್ನ ಎಲ್ಲರಿಗೂ ತೋರಿಸಿ ಭೇಷ್ ಎನಿಸಿಕೊಂಡಿದ್ದಾರೆ.
ಹಾಗೆ ಇದೀಗ ಈ ಚಿತ್ರಕ್ಕೆ ಫುಲ್ CG ವರ್ಕ್ ಮಾಡಿಸುತ್ತಿದ್ದಾರೆ. ತಾವೇ ಖುದ್ ಕೆನಡಾಕ್ಕೂ ಹೋಗಿದ್ದಾರೆ. ಅಲ್ಲಿಯೇ ಇದ್ದು ಹೆಚ್ಚು ಕಡಿಮೆ ಇದೀಗ ಶೇಕಡ 25 ರಷ್ಟು ಭಾಗದ (CG) ಪೂರ್ಣಗೊಳಿಸಿದ್ದಾರೆ. ತುಂಬಾನೆ ಚೆನ್ನಾಗಿಯೇ ಇಡೀ ಚಿತ್ರಕ್ಕೆ CG ವರ್ಕ್ ಆಗುತ್ತಿದೆ. ಹಾಲಿವುಡ್ ಟೆಕ್ನಿಷನ್ಗಳು ಈ ಒಂದು ಕೆಲಸ ಮಾಡುತ್ತಿದ್ದಾರೆ.
ಕೆನಡಾದಲ್ಲಿಯೇ 45 ಚಿತ್ರಕ್ಕೆ CG ವರ್ಕ್ ಆಗುತ್ತಿದೆ. ಇಲ್ಲಿಯ ಆಸ್ಕರ್ ನಾಮಿನೇಟೆಡ್ ಮಾರ್ಸ್ ಹೆಸರಿನ ಕಂಪನಿ ಕೆಲಸ ಮಾಡುತ್ತಿದೆ. ಈ ಮೂಲಕ ಫಸ್ಟ್ ಟೈಮ್ ಇಂಡಿಯನ್ ಸಿನಿಮಾಕ್ಕೂ ಕೆಲಸ ಮಾಡುತ್ತಿದೆ. ಹಾಗೆ ಈ ವಿಚಾರದಲ್ಲಿ ಕನ್ನಡದ ಈ 45 ಚಿತ್ರವೇ ಫಸ್ಟ್ ಆಗಿದೆ.