ಪುಷ್ಪ 2 ದಿ ರೂಲ್ ಸಿನಿಮಾವನ್ನು ನೋಡುವಾಗ ಥಿಯೇಟರ್ ಕ್ಯಾಂಟೀನ್ ಮಾಲೀಕ, ಪ್ರೇಕ್ಷಕರೊಬ್ಬರ ಕಿವಿ ಕಿಚ್ಚಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ನಗರದ ಇಂದರ್ಗಂಜ್ ಪ್ರದೇಶದ ಕೈಲಾಶ್ ಥಿಯೇಟರ್ನಲ್ಲಿ ಈ ಘಟನೆ ನಡೆದಿದೆ.ಡಿಸೆಂಬರ್ 10ರಂದು ರಾತ್ರಿ ಗ್ವಾಲಿಯರ್ನ ಫಾಲ್ಕಾ ಬಜಾರ್ ಪ್ರದೇಶದಲ್ಲಿನ ಕಾಜಲ್ ಟಾಕೀಸ್ನಲ್ಲಿ ಈ ಘಟನೆ ನಡೆದಿದ್ದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ. ಪುಷ್ಪ 2 ಸಿನಿಮಾದ ಒಂದು ದೃಶ್ಯದಿಂದ ಪ್ರೇರೇಪಿಸಲ್ಪಟ್ಟು ಹೀಗೆ ಮಾಡಿದ್ದಾಗಿ ಹೇಳಲಾಗುತ್ತಿದೆ.
ಗುಡಗುಡಿ ನಾಕಾ ನಿವಾಸಿ ಸಂತ್ರಸ್ತ ಶಬ್ಬೀರ್ ಖಾನ್ ಪುಷ್ಪ 2 ಮೂವಿ ನೋಡಲು ಥಿಯೇಟರ್ಗೆ ಹೋಗಿದ್ದರು. ಇಂಟರ್ವಲ್ ಸಮಯದಲ್ಲಿ ಅವರು ತಿಂಡಿ ಖರೀದಿಸಲು ಹೋದರು. ಹಣ ಪಾವತಿಸುವ ವಿಚಾರದಲ್ಲಿ ಜಗಳವಾಡಿದರು ಎಂದು ಕ್ಯಾಂಟೀನ್ ಸಿಬ್ಬಂದಿ ರಾಜು, ಚಂದನ್ ಮತ್ತು ಎಂಎ ಖಾನ್ ಆರೋಪಿಸಿದ್ದಾರೆ.ವಾದವಿವಾದ ಜೋರಾಗಿ ಕೈ ಕೈ ಮಿಲಾಯಿಸಿದೆ. ಈ ಸಂದರ್ಭದಲ್ಲಿ ಕ್ಯಾಂಟೀನ್ ಸಿಬ್ಬಂದಿ ಶಬ್ಬೀರ್ ಮೇಲೆ ಹಲ್ಲೆ ನಡೆಸಿ ಅವರ ಕಿವಿಯನ್ನು ಕಚ್ಚಿದರು. ಇದರಿಂದ ಭಾರೀ ರಕ್ತಸ್ರಾವ ಕೂಡಾ ಆಗಿದೆ.ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು ಎಫ್ಐಆರ್ನಲ್ಲಿ ಕಿವಿ ಕಚ್ಚಿದ್ದಾನೆ ಎಂದು ನಮೂದಿಸಲಾಗಿದೆ.
ಕೇವಲ 6 ದಿನದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ದೀ ರೂಲ್ 1,000 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಇದೊಂದು ದೊಡ್ಡ ಮೈಲುಗಲ್ಲಾಗಿದ್ದು ಹಿಂದಿ ಸಿನಿಮಾಗಳಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾ 2021ರಲ್ಲಿ ಪಾರ್ಟ್- 1 ರಿಲೀಸ್ ಆಗಿತ್ತು. ಇದೀಗ ಭಾಗ-2 ಪ್ರದರ್ಶನ ಕಾಣುತ್ತಿದೆ.