ಚೆನ್ನೈ: ಈಗಾಗಲೇ ಲೋಕಸಭಾ ಚುನಾವಣೆ 2024ರ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಬೂತ್ವೊಂದರಲ್ಲಿ ಕೇವಲ ಒಂದೇ ಮತ ತೆಗೆದುಕೊಂಡಿದ್ದಾರೆ. ಬೂತ್ವೊಂದರಲ್ಲಿ ಒಂದೇ ಮತ ಪಡೆದವರು ತಮಿಳುನಾಡಿನ ಸಿಎಂ ಆಗಲು ಹೊರಟ್ಟಿದ್ದಾರೆ ಅಂತೆಲ್ಲಾ ಟ್ರೋಲ್ ಆಗಿದ್ದಾರೆ. ಈ ರೀತಿಯಾದಂತಹ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕೀಡಿಗೇಡಿಗಳು ಹರಿಬಿಟ್ಟು ಅಣ್ಣಾಮಲೈಗೆ ಅಪಹಾಸ್ಯ ಮಾಡಿದ್ದಾರೆ.
ಆದರೆ ಇದು ಸುಳ್ಳು ಸುದ್ದಿ, ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್ ಜಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನಾ ಹಂಚಿಕೊಂಡು ಪ್ರತಿಕ್ರಿಯೆ ನೀಡಿದ ಅವರು, ಅಣ್ಣಾಮಲೈಗೆ ಬೂತ್ವೊಂದರಲ್ಲಿ ಕೇವಲ ಒಂದೇ ಮತ ಪಡೆದುಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೊಳ್ಳಲಾಗುತ್ತಿದೆ. ಇದು ತಿರುಚಿದ ಚಿತ್ರ ಅವರಿಗೆ 101 ವೋಟ್ಗಳು ಬಂದಿದ್ದವು. 0 ಮತ್ತು 1 ಸಂಖ್ಯೆಯನ್ನು ಅಳಿಸಿಹಾಕಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಪಡೆದ ಮತಗಳ ಸಂಖ್ಯೆ ಇರುವ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ, ಅಣ್ಣಾಮಲೈ ಅವರು ಬೂತ್ವೊಂದರಲ್ಲಿ ಒಂದೇ ಮತ ತೆಗೆದುಕೊಂಡಿದ್ದಾರೆ. ಎನ್ನುವುದು ಸುಳ್ಳು ಮಾಹಿತಿ ಎಂದಿದ್ದಾರೆ.