ದಕ್ಷಿಣ ಭಾರತವಲ್ಲದೇ ಪಾನ್ ಇಂಡಿಯಾ ತಾರೆಯಾಗಿ ಹಲವು ಭಾಷೆಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಮಿಂಚಿದ್ದ ಈ ಸ್ಟಾರ್ ಬಾಲನಟಿ ಇದ್ದಕ್ಕಿದ್ದಂತೆ ಚಿತ್ರರಂಗ ಬಿಟ್ಟು ಏಕೆ ದೂರವಾದ್ರು ಅಂತ ಅನ್ಸಿರತ್ತೆ. ಪುಟಾಣಿ ಏಜೇಂಟ್ 123, ರಾಮ ಲಕ್ಷ್ಮಣ, ಪ್ರಚಂಡ ಪುಟಾಣಿಗಳು, ಸಿಂಹದ ಮರಿ ಸೈನ್ಯ, ನಾಗರಹೊಳೆ ಹೀಗೆ ಸಾಲು ಸಾಲು ಹಿಟ್ ಮಕ್ಕಳ ಚಿತ್ರಗಳಲ್ಲಿ ನಟಿಸಿ ಸಿನಿ ರಸಿಕರ ಮನದಲ್ಲಿ ಸೈ ಎನಿಸಿಕೊಂಡಿದ್ದ ಇವರು ಯಾರಿಗೆ ತಿಳಿದಿಲ್ಲ ಹೇಳಿ. ಈಗಲೂ ಮಕ್ಕಳ ದಿನಾಚರಣೆ ಬಂದರೆ TV ಯಲ್ಲಿ ಇವರದ್ದೇ ಸದ್ದು. ಅಷ್ಟಕ್ಕೂ ಇವರು ಯಾರು? ಇವರು ಈಗ ಹೇಗಿದ್ದಾರೆ, ಎಲ್ಲಿದ್ದಾರೆ, ಗೊತ್ತಾ? ಈ ಮುಂದಿನ ಸ್ಪೆಷಲ್ ಸ್ಟೋರಿ ನೋಡಿ.
ಚಿತ್ರರಂಗದಲ್ಲಿ ಬಾಲತಾರೆ ನಟಿ ಎಲ್ಲ ಗಮನಸೆಳೆದಿದ್ದ ಬೇಬಿ ಇಂದಿರಾ ಅವರನ್ನು ಇಂದಿಗೂ ಜನ ಮರೆಯಲು ಸಾಧ್ಯವಿಲ್ಲ. 90ರ ದಶಕದ ಸಿನಿ ಪ್ರೇಕ್ಷಕರಿಗಂತೂ ತೆರೆಯ ಮೇಲೆ ಇವರ ಅಭಿನಯ ನೋಡೋದೇ ಒಂದು ಹಬ್ಬ. ಅಷ್ಟು ಮುದ್ದಾಗಿ, ಮುಗ್ಧತೆಯಿಂದ ನಟಿಸಿ ಎಲ್ಲರ ಮನೆ ಮನಗಳಲ್ಲಿ ನೆಲೆಸಿದ್ದರು ಈ ಬೇಬಿ ಇಂದಿರಾ. ಭಾರತ ಚಿತ್ರರಂಗ ಬಾಲತಾರೆಯಾಗಿ ಖ್ಯಾತಿಗೆ ಪಡೆದ ಬಾಲಕಲಾವಿದೆ ಈಕೆ.
ಆದರೆ, ನಾಯಕನಟಿಯಾಗುವ ಸಮಯಕ್ಕೆ ಎಲ್ಲಾ ಚಿತ್ರರಂಗದಿಂದ ಕಣ್ಮರೆಯಾಗಿದ್ದರು. ಇವರ ಸುಳಿವು ಯಾರಿಗೂ ತಿಳಿದಿರಲಿಲ್ಲ. ಇತ್ತೀಚಿಗೆ ಖಾಸಗಿ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡಿರುವ ಇವರು ಚೆನ್ನೈನಲ್ಲಿ ವಾಸಿಸುತ್ತಿರುವುದು ತಿಳಿದು ಬಂದಿದೆ. ಈಗ ಇವರು ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದಿದ್ದು, ಮದುವೆಯಾದ ತಕ್ಷಣ ನಟನೆಯನ್ನು ಬಿಟ್ಟೆ ಎಂದಿದ್ದಾರೆ. ಸುಮಾರು 3 ವರ್ಷ ವಯಸ್ಸಿನಿಂದಲೂ ಇವರ ಅಭಿನಯ ಆರಂಭಿಸಿದ್ದು ಈಗ ದೊಡ್ಡ ಬ್ರೇಕ್ ತೆಗೆದುಕೊಂಡು ಮಕ್ಕಳು ಮೊಮ್ಮಕಳ ಜೊತೆ ಹಾಯಾಗಿದ್ದಾರೆ. ಇವರು ಪ್ರಸಿದ್ಧ ತಮಿಳು ನಟರಾದ ಮಾಸ್ಟರ್ ಶ್ರೀಧರ್ ರವರನ್ನು ಮದುವೆ ಮಾಡಿಕೊಂಡಿದ್ದರು.
ಬೇಬಿ ಇಂದಿರಾ ಅವರು ಶ್ರೀಧರನ್ ಎಂಬುವವರ ಜತೆ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದು ಪ್ರಸ್ತುತ ಚನ್ನೈನಲ್ಲಿಯೇ ವಾಸವಾಗಿದ್ದು, ಇದೀಗ ಅವರಿಗೆ ಪ್ರಶಾಂತ ಶ್ರೀಧರ ಹಾಗೂ ರಕ್ಷಿತ ಶ್ರೀಧರ್ ಎಂಬ ಇಬ್ಬರು ಗಂಡುಮಕ್ಕಳು ಹಾಗೂ ಮೊಮ್ಮಕ್ಕಳು ಇದ್ದಾರೆ. ತಾಯಿಯ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ ಹಾಗೂ ಅವರೇ ನಮಗೆ ಸ್ಫೂರ್ತಿ ಎಂದು ತಾಯಿಯ ನಟನೆ ಬಗ್ಗೆ ಮಕ್ಕಳು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಇನ್ನು ಬೇಬಿ ಇಂದಿರಾ ಅವರ ಗಂಡ ಮೃತಾರಾಗಿದ್ದಾರೆ.
ನಟನೆ ನಿನಗೆ ಬೇಡ ಅಂದಿದ್ಯಾರು?
ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮಿಂಚಿ ಮರೆಯಾದ ಈ ತಾರೆಗೆ ನೀನು ನಟಿಸುವುದು ಬೇಡ, ಚಿತ್ರರಂಗ, ಸಿನಿಮಾ ನನಗೆ ಕೊನೆಯಾಗಲಿ ಎಂದು ಇವರ ತಂದೆ ಹೇಳಿದ್ದರಂತೆ. ಇವರ ತಂದೆಯೂ ಕೂಡ ಪ್ರಸಿದ್ಧ ನಿರ್ದೇಶಕರು ಶ್ರೀ ರಾಮುಲು ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದರು. ಒಮ್ಮೆ ಇವರು ಮಾಡಿದ ನಟನೆಗೆ ಸಿಕ್ಕ ಪ್ರಶಂಸೆಯನ್ನು ಕಂಡು ನಂತರ ಒಪ್ಪಿದರಂತೆ. ನಾವು ಕಲೆಯನ್ನು ಬಿಟ್ಟರು, ಕಲೆ ನಮ್ಮನ್ನ ಬಿಡುವುದಿಲ್ಲ ಎಂಬ ಒಂದು ಮಾತಿದೆ.
ಆ ಒಂದು ವರ್ಷದಲ್ಲಿ ಬರೋಬ್ಬರಿ 6 ಭಾಷೆ ಕಲಿತದ್ದು ಹೇಗೆ?
ತಾನು ಚಿಕ್ಕವಳಿದ್ದಾಗ ಏನನ್ನಾದರೂ ಸುಲಭವಾಗಿ ಗ್ರಹಿಸುತಿದ್ದೆ. ಒಂದು ಚಿತ್ರವಾದಮೇಲೆ ಎಲ್ಲಾ ಆಫರ್ ಗಳು ಬರುತ್ತಾ ಹೋದವು, ಸೌತ್ ಸೇರಿದಂತೆ ಪಾನ್ ಇಂಡಿಯಾ ಭಾಷೆಗಳಲ್ಲಿ ನಟಿಸುತ್ತಿದ್ದ ಇವರು ಒಂದೇ ವರ್ಷದಲ್ಲಿ ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ,ಇಂಗ್ಲಿಷ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವುದನ್ನು ಕಲಿತರಂತೆ. ಅಷ್ಟು ಚಿಕ್ಕ ವಯಸ್ಸಿಗೆ ಕೇವಲ ಒಂದೇ ಒಂದು ವರ್ಷದಲ್ಲಿ ನಾನು 6 ಭಾಷೆ ಕಲಿತೆ ಎಂದಿದ್ದಾರೆ.ಆ ಸಮಯದ ಎಲ್ಲ ಭಾಷೆಯ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದೇನೆ. ಅತ್ಯುತ್ತಮ ಬಾಲನಟಿ ಪ್ರಶಸ್ತಿಯನ್ನೂ ಪಡೆದಿದ್ದೇನೆ. ನಿರ್ದೇಶಕರು ನಮ್ಮ ಮನೆಗೆ ಬಂದು ಅವಕಾಶ ನೀಡಲು ಮುಂದಾದರು. ಚಿತ್ರದ ಮೊದಲ ದೃಶ್ಯದಲ್ಲೇ ನಿರ್ದೇಶಕರು ಚಪ್ಪಾಳೆ ತಟ್ಟಿದ್ದು ಈಗಲೂ ನೆನಪಿದೆ ಎಂದಿದ್ದಾರೆ. ಆ ದೃಶ್ಯ ನೋಡಿ ತನ್ನ ತಂದೆ ಖುಷಿಯಾದರು ಅಂತ ಬೇಬಿ ಇಂದಿರಾ ಹೇಳಿಕೊಂಡಿದ್ದಾರೆ.