ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ವಿವಾಹ ಪೂರ್ವ ಶಾಸ್ತ್ರಗಳು ಅದ್ಧೂರಿಯಾಗಿ ಶುರುವಾಗಿದೆ. ತೆಲುಗಿನ ಖ್ಯಾತ ನಟ ನಾಗಾರ್ಜುನ ಅವರ ಪುತ್ರ ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ಮದುವೆಯಾಗುತ್ತಿದ್ದು ಇವರ ವಿವಾಹ ಪೂರ್ವ ಶಾಸ್ತ್ರ ಈಗಾಗಲೇ ಶುರುವಾಗಿದೆ. ಮದುವೆ ಕಾರ್ಯಕ್ರಮದ ಆರಂಭದ ಭಾಗವಾಗಿ ಇಬ್ಬರೂ ಅರಶಿನ ಕುಂಕುಮ ನೀರಿನಲ್ಲಿ ಪವಿತ್ರವಾದ ಮಂಗಳಸ್ನಾನ ಮಾಡಿದ್ದಾರೆ. ಇಬ್ಬರೂ ಖುಷಿ ಖುಷಿಯಾಗಿ ಭಾಗಿಯಾಗಿರುವ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿವೆ.
ಮದುವೆ ಕಾರ್ಯಕ್ರಮದ ಆರಂಭದ ಭಾಗವಾಗಿ ನಾಗಚೈತನ್ಯ ಹಾಗೂ ಶೋಭಿತಾ ಅರಿಶಿಣ ಕುಂಕುಮ ನೀರಿನಲ್ಲಿ ಪವಿತ್ರವಾದ ಮಂಗಳಸ್ನಾನ ಮಾಡಿದ್ದಾರೆ. ತೆಲುಗು ವಿವಾಹ ಕಾರ್ಯಕ್ರಮಗಳಲ್ಲಿ ಮಂಗಳಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ.ಜೊತೆಗೆ ಹಳದಿ ಶಾಸ್ತ್ರ ಕೂಡ ನೆರವೇರಿದೆ. ಶಾಸ್ತ್ರದ ವೇಳೆ, ಇಬ್ಬರೂ ಫುಲ್ ಖುಷಿಯಾಗಿದ್ದಾರೆ.
ಶುಕ್ರವಾರ ಮದುವೆ ಶಾಸ್ತ್ರಗಳು ಶುರುವಾಗಿದ್ದು, ಇದು ಪಾವಿತ್ರ್ಯತೆ, ಹೊಸತನವನ್ನು ಸೂಚಿಸುವ ಶಾಸ್ತ್ರವಾಗಿದ್ದು, ಖಣಾತ್ಮಕತೆಯನ್ನು ತೊಡೆದುಹಾಕಿ ಅದೃಷ್ಟ, ಆರೋಗ್ಯ, ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
ಇದೇ ಡಿ.4ರಂದು ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಮದುವೆ ಜರುಗಲಿದೆ. ಈ ಮದುವೆಗೆ ತೆಲುಗು ಖ್ಯಾತ ನಟ, ನಟಿಯರು ಮತ್ತು ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.