ಸಂಸತ್ ನಲ್ಲಿ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣಕ್ಕೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಂದನಾರ್ಪಣೆ ಸಲ್ಲಿಸಿದರು. ಈ ವೇಳೆ ರಾಷ್ಟ್ರಪತಿಗಳ ಭಾಷಣದ ಮಹತ್ವ ವಿವರಿಸಿದ ಪ್ರಧಾನಿ ಮೋದಿ, ಜೊತೆಯಲ್ಲೇ ವಿಪಕ್ಷಗಳಿಗೂ ಚಾಟಿ ಬೀಸಿದರು.
ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು ಇಂತಿವೆ:
- ಆದಾಯ ತೆರಿಗೆ ಇಳಿಕೆ ಮಾಡಿ ನಾವು ಮಧ್ಯಮ ವರ್ಗದವರಿಗೆ ಲಾಭ ಮಾಡಿಕೊಟ್ಟಿದ್ದೇವೆ.
- 12 ಲಕ್ಷ ರೂ.ವರೆಗಿನ ಆದಾಯಕ್ಕೆ ಆದಾಯ ತೆರಿಗೆ ವಿನಾಯ್ತಿ: ಮಧ್ಯಮ ವರ್ಗಕ್ಕೆ ಭಾರೀ ಲಾಭ
- ಎವಿ, ವರ್ಚ್ಯುವಲ್ ರಿಯಾಲಿಟಿ, ತ್ರಿಡಿ ಪ್ರಿಂಟಿಂಗ್ ಸೇರಿದಂತೆ ಹಲವು ವಲಯಗಳಲ್ಲಿ ಕಾರ್ಯ
- ಭಾರತ ಗೇಮಿಂಗ್ ಕ್ಯಾಪಿಟಲ್ ಆಗಬೇಕೆಂದು ಶ್ರಮ ಹಾಕುತ್ತಿದ್ದೇವೆ
- ಭಾರತಕ್ಕೆ ಎರಡು AI ಬೇಕು.. ಒಂದು ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮತ್ತೊಂದು ಆಸ್ಪಿರೇಷನಲ್ ಇಂಡಿಯಾ
- ಭಾರತದ ಇಂಡಿಯಾ AI ಮಿಷನ್ ವಿಶ್ವದ ಎದುರು ಸಾಕಷ್ಟು ಮಹತ್ವ ಪಡೆದಿದೆ
- ಭಾರತದ ಕೆಲವು ರಾಜಕೀಯ ಪಕ್ಷಗಳು ಯುವಕರಿಗೆ ನಿರಂತರ ಮೋಸ ಮಾಡುತ್ತಿವೆ
- ಚುನಾವಣೆ ವೇಳೆ ಯುವಕರಿಗೆ ಹಲವು ರೀತಿಯ ಭತ್ಯೆಗಳನ್ನು ನೀಡುವ ಭರವಸೆ ನೀಡಿ ಮೋಸ ಮಾಡುತ್ತಿವೆ
- ಅಧಿಕೃತ ವಿಪಕ್ಷ ಇಲ್ಲದಿದ್ದರೂ ನಾವು ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷಗಳ ನಾಯಕರನ್ನು ಸಭೆಗೆ ಆಹ್ವಾನಿಸುತ್ತಿದ್ದೆವು
- ದಿಲ್ಲಿಯಲ್ಲಿ ಕೆಲವು ಕುಟುಂಬದವರ ಮನೆಗಳು ಇದೀಗ ಮ್ಯೂಜಿಯಂ ಆಗಿ ಪರಿವರ್ತನೆಗೊಂಡಿದೆ
- ಎಥೆನಾಲ್ ಬಳಕೆಯಿಂದ ಪೆಟ್ರೋಲ್, ಡೀಸೆಲ್ ಆಮದು ಕಡಿಮೆಯಾಗಿದೆ.
- ಸುಮಾರು 1 ಲಕ್ಷ ಕೋಟಿ ರೂ. ಉಳಿತಾಯವಾಗಿ ದೇಶದ ರೈತರ ಕೈ ಸೇರಿದೆ.
- ಸರ್ಕಾರಕ್ಕೆ ಉಳಿತಾಯ ಆದ ಹಣವನ್ನು ಗಾಜಿನ ಮನೆ ನಿರ್ಮಿಸಲು ಬಳಸಲಿಲ್ಲ, ಬಡವರಿಗೆ ಬಳಸಿದೆವು.
- ನಮ್ಮ ಸರ್ಕಾರಕ್ಕೂ ಮೊದಲು ಪತ್ರಿಕೆಗಳಲ್ಲಿ ಹಗರಣದ ಸುದ್ದಿಗಳೇ ಬರುತ್ತಿದ್ದವು.
- ರಸ್ತೆ, ರೈಲು, ಗ್ರಾಮೀಣಾಭಿವೃದ್ಧಿಗೆ ನಾವು ಹಣ ವ್ಯಯ ಮಾಡುತ್ತಿದ್ದೇವೆ.
- ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ ಜನ ಸಾಮಾನ್ಯರ 1 ಲಕ್ಷದ 20 ಕೋಟಿ ರೂಪಾಯಿ ಉಳಿತಾಯವಾಗಿದೆ.
- ಜನೌಷಧಿ ಕೇಂದ್ರದಿಂದಾಗಿ ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಗೆ ಔಷಧ ಸಿಗುತ್ತಿದೆ.
- ಶೇ. 80ರಷ್ಟು ವಿನಾಯ್ತಿ ನೀಡಿ ಔಷಧಗಳನ್ನು ನಾವು ನೀಡುತ್ತಿದ್ದೇವೆ.
- LED ಬಲ್ಪ್ ಅಭಿಮಾನ ಮಾಡಿ ನಾವು 400 ರೂ. ಬಲ್ಬ್ ಬೆಲೆಯನ್ನು 40 ರೂ.ಗೆ ತಂದೆವು.
- ಎಲ್ ಇಡಿ ಬಲ್ಬ್ ನಿಂದ ಹಣ ಹಾಗೂ ವಿದ್ಯುತ್ ಉಳಿತಾಯ ಆಗ್ತಿದೆ.
- ರಾಷ್ಟ್ರಪತಿಗಳ ಭಾಷಣವು ವಿಕಸಿತ ಭಾರತದ ಸಂಕಲ್ಪವನ್ನು ಮತ್ತಷ್ಟು ಶಕ್ತಿಯುತಗೊಳಿಸಿದೆ.
- ನಾವು ಸಮರ್ಪಿತ ಭಾವದಿಂದ ಕೆಲಸ ಮಾಡಿದ್ದೇವೆ.
- ತಳಮಟ್ಟದಿಂದ ಬಂದವರಿಗೆ ಮಾತ್ರ ತಳಮಟ್ಟದ ಸಮಸ್ಯೆ ಗೊತ್ತಿರುತ್ತದೆ.
- ದೇಶದ 25 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರೆ.
- ಕಾಂಗ್ರೆಸ್ ನ ಗರೀಬಿ ಹಠಾವೋ ಘೋಷಣೆಗೆ ವ್ಯಂಗ್ಯವಾಡಿದ ಪ್ರಧಾನಿ ಮೋದಿ.
- ಬಡವರು ಮತ್ತು ಮಧ್ಯಮ ವರ್ಗದವರ ಸಂಕಷ್ಟ ಕೆಲವರಿಗೆ ಗೊತ್ತಾಗೋದಿಲ್ಲ
- ಬಡವರಿಗೆ ನಮ್ಮ ಸರ್ಕಾರ 4 ಕೋಟಿ ಮನೆಗಳನ್ನು ನಿರ್ಮಿಸಿದೆ
- ಸೂರು ಇರುವ ಮನೆ ಸಿಗೋದು ಎಷ್ಟು ಮುಖ್ಯ ಅನ್ನೋದು ನಮಗೆ ಗೊತ್ತು
- ಮಹಿಳೆಯರು ಬಯಲು ಶೌಚಕ್ಕೆ ತೆರಳೋದು ಅನಿವಾರ್ಯ ಆಗಬಾರದು
- ನಿತ್ಯಕರ್ಮಕ್ಕಾಗಿ ಮಹಿಳೆಯರು ಬೆಳಗ್ಗೆ, ರಾತ್ರಿ ವೇಳೆ ಬಯಲಿಗೆ ಹೋಗಬೇಕಿತ್ತು
- 12 ಕೋಟಿ ಶೌಚಾಲಯ ನಿರ್ಮಿಸಿರುವ ನಾವು ಬಡವರ ಕಷ್ಟಕ್ಕೆ ಸ್ಪಂದಿಸಿದ್ದೇವೆ
- ಬಡವರ ಗುಡಿಸಿಲಿನಲ್ಲಿ ಫೋಟೋ ಸೆಷನ್ ಮಾಡೋರಿಗೆ ಕಷ್ಟ ಗೊತ್ತಿಲ್ಲ
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc