ಲೋಕಸಭಾ ಚುನಾವಣೆ ಅಖಾಡದಲ್ಲಿ ರಣಕಲಿಗಳ ಅಬ್ಬರ ತಾರಕಕ್ಕೇರಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷಗಳು ತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಿವೆ. ದೇಶಾದ್ಯಂತ ಪ್ರಚಾರದ ಅಬ್ಬರವೂ ಜೋರಾಗಿಯೇ ಇದೆ. ಸುಡುವ ಬಿಸಿಲನ್ನು ಲೆಕ್ಕಿಸದೇ ಸಮಾವೇಶ, ರೋಡ್ ಶೋಗಳು ನಡೆಯುತ್ತಿವೆ. ಈಗಾಗಲೇ ಪ್ರಚಾರದ ಅಖಾಡಕ್ಕೆ ಧುಮುಕಿರೋ ಮೋದಿ, ಕರ್ನಾಟಕದಲೂ ಕ್ಯಾಂಪೇನ್ ಕಾವು ಹೆಚ್ಚಿಸಲು ಮುಂದಾಗಿದ್ದಾರೆ. ಇದೇ ಏಪ್ರಿಲ್ 14ಕ್ಕೆ ರಾಜಧಾನಿ ಬೆಂಗಳೂರಿಗೆ ಮೋದಿ ಆಗಮಿಸಲಿದ್ದಾರೆ. ರಾಜ್ಯದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಕಮಲ ಕಲಿಗಳ ಪರ ಮತಬೇಟೆಗೆ ಇಳಿಯಲಿದ್ದಾರೆ.
ಕರ್ನಾಟಕದಲ್ಲಿ ಮೋದಿ ಕ್ಯಾಂಪೇನ್ ಎಲ್ಲೆಲ್ಲಿ..!
ಏ.14ಕ್ಕೆ ಮಧ್ಯಾಹ್ನ 3 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ಪ್ರಚಾರ
ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಪರ ಮೋದಿ ಪ್ರಚಾರ
ಏ.14ಕ್ಕೆ ಸಂಜೆ “ಬೆಂಗಳೂರು ಉತ್ತರ”ದಲ್ಲಿ ಕ್ಯಾಂಪೇನ್
ಬ್ಯಾಟರಾಯನಪುರ, ಹೆಬ್ಬಾಳ ಕ್ಷೇತ್ರದಲ್ಲಿ ರೋಡ್ ಶೋ
ರಾಜ್ಯ ಬಿಜೆಪಿಯ ರೋಡ್ ಮ್ಯಾಪ್ ಸಿದ್ಧಪಡಿಸಿದ್ದಾರೆ