ಮನುಷ್ಯನ ಆರೋಗ್ಯಕ್ಕೆ ಬೇಕಾಗಿರುವ ಸತ್ವಗಳು ಹಣ್ಣುಗಳಲ್ಲಿ ಹೇರಳವಾಗಿದೆ. ದಾಳಿಂಬೆ ನಮಗೆ ಸಾಮಾನ್ಯವಾಗಿ ಸಿಗುವ ಹಣ್ಣು. ದಾಳಿಂಬೆ ಹಣ್ಣು ತನ್ನಲ್ಲಿ ಹಲವಾರು ಆರೋಗ್ಯಕ್ಕೆ ಉಪಯುಕ್ತವಾದ ಅಂಶಗಳನ್ನು ಅಡಗಿಸಿಕೊಂಡಿದೆ. ದಾಳಿಂಬೆ ಹಣ್ಣು ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಲ್ ಮತ್ತು ಆ್ಯಂಟಿ ಟ್ಯೂಮರ್ ಇದ್ದು, ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲ ಯಥೇಚ್ಛವಾಗಿದೆ. ಪ್ರತಿನಿತ್ಯ ದಾಳಿಂಬೆ ಸೇವನೆಯಿಂದ ರೋಗ ನಿರೋಧಕ ಶಕ್ತಿ ಕೂಡ ವೃದ್ಧಿಯಾಗಲಿದೆ.
ದಾಳಿಂಬೆ ಸೇವನೆಯಿಂದ ಆಗುವ ಪ್ರಯೋಜನ
ಹೃದಯದ ಸಮಸ್ಯೆ ದಾಳಿಂಬೆ ರಾಮಬಾಣ,ಅಜೀರ್ಣದ ಸಮಸ್ಯೆ ಪರಿಹಾರಆಗಲಿದೆ, ಚರ್ಮದ ಕ್ಯಾನ್ಸರ್ ತಡೆಗಟ್ಟಲಿದೆ, ಸಂಧಿವಾತ ಕಡಿಮೆ ಮಾಡುತ್ತದೆ, ಉರಿಯೂತ ಕಡಿಮೆ ಮಾಡಲಿದೆ, ಒಸಡುಗಳನ್ನು ದೃಢಗೊಳಿಸುತ್ತದೆ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.