ಪಾಕಿಸ್ತಾನ ಆರ್ಥಿಕವಾಗಿ ಪಾಪರ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು, ಇನ್ನು ಪಿಓಕೆ ಯಲ್ಲಿ ಭಾರತ ಪರ ಒಲವು ಹೆಚ್ಚಾಗಿದೆ, ಇದರ ಮಧ್ಯ ಪಾಕ್ ಸಂಸದ ಸೈಯದ್ ಮುಸ್ತಫಾ ಕಾಮಾಲ್ ಹೇಳಿಕೆ ಸಕ್ಕತ್ ವೈರಲ್ ಆಗ್ತಾ ಇದೆ.
ಭಾರತವು ಚಂದ್ರನ ಮೇಲೆ ಇಳಿದಿರುವ ವರದಿ ಮಾಡುತ್ತಿದ್ದರೆ, ಪಾಕ್ ಇನ್ನೂ ಚರಂಡಿಯಲ್ಲಿ ಮಕ್ಕಳು ಬಿದ್ದಿರುವ ಸುದ್ದಿ ಮಾಡುತ್ತಿದೆ ಎಂದು ಪಾಕಿಸ್ತಾನದ ಸಂಸದ ಸೈಯದ್ ಮುಸ್ತಫಾ ಕಮಾಲ್ ಹೇಳಿದ್ದಾರೆ.
ಇದು ಭಾರತ ಹಾಗೂ ಪಾಕಿಸ್ತಾನದ ನಡುವೆ ಇರುವ ವ್ಯತ್ಯಾಸ ಎಂದು ಪಾಕ್ ಸಂಸದ ಸೈಯದ್ ಮುಸ್ತಫಾ ಕಮಾಲ್ ಸಂಸತ್ತಿನಲ್ಲಿ ವಿವರಿಸಿದ್ದಾರೆ. ಪಾಕಿಸ್ತಾನ ಸಂಸತ್ತಿನಲ್ಲಿ ಮತ್ತೊಮ್ಮೆ ಭಾರತಕ್ಕೆ ಜಯಘೋಷ ಮೊಳಗಿದ್ದು, ಶತ್ರು ರಾಷ್ಟ್ರದ ಅಸಹಾಯಕತೆ ಬಯಲಾಗಿದೆ.