ಅಲ್ಲು ಅರ್ಜುನ್ ನಟನೆಯ ‘ಪುಷ್ಪ’-2 ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಭರ್ಜರಿ ಗಳಿಕೆ ಕಂಡಿದೆ. ದೊಡ್ಡಮಟ್ಟದಲ್ಲೇ ಸಿನಿಮಾ ಓಪನಿಂಗ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ರಾಜಮೌಳಿ ನಿರ್ದೇಶನದ ‘RRR’ ಚಿತ್ರದ ಮೊದಲ ದಿನದ ಬಾಕ್ಸಾಫೀಸ್ ಗಳಿಕೆ ಹಿಂದಿಕ್ಕಿ ಸದ್ದು ಮಾಡ್ತಿದೆ.
ಬುಧವಾರ ರಾತ್ರಿಯಿಂದಲೇ ‘ಪುಷ್ಪ’-2 ಪ್ರೀಮಿಯರ್ ಶೋಗಳು ಶುರುವಾಗಿತ್ತು. ಅಡ್ವಾನ್ಸ್ ಬುಕ್ಕಿಂಗ್ ಕೂಡ ಜೋರಾಗಿತ್ತು. ಟಿಕೆಟ್ ದರ ಹೆಚ್ಚಿಸಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದರು. ಇನ್ನು ಗುರುವಾರವೂ ಎಲ್ಲೆಡೆ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಿದ್ದಕ್ಕೆ ಕನ್ನಡದಲ್ಲೂ ಹಲವು ಶೋಗಳು ಚಿತ್ರಕ್ಕೆ ಸಿಕ್ಕಿದ್ದು, ಇಲ್ಲಿಯೂ ಉತ್ತಮ ಗಳಿಕೆ ಆಗಿದೆ.
ಪುಷ್ಪ 2 ಮೂವಿ ಸಿಕ್ಕಾಪಟ್ಟೆ ಸೌಂಡ್ ಮಾಡುವಾಗ ಜನರ ಅದರ ಬಜೆಟ್, ಬಾಕ್ಸ್ ಆಫೀಸ್ ಗಳಿಕೆ ಕುರಿತು ಮಾತನಾಡುತ್ತಿದ್ದಾರೆ. ಪುಷ್ಪ ಸಿನಿಮಾ ಸೆಟ್ಟೇರುವಾಗ ಇದು 5 ವರ್ಷದ ಪ್ರಾಜೆಕ್ಟ್ ಎನ್ನುವುದು ಗೊತ್ತಿತ್ತಾದರೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ರಶ್ಮಿಕಾ ಪ್ಯಾನ್ ಇಂಡಿಯಾ ನಟಿಯಾದರು. ಅಮೂಲ್ಯ ಭಾರಧ್ವಾಜ್ ಚಪ್ಪಾಳೆ ಗಿಟ್ಟಿಸಿಕೊಂಡರು. ಅಲ್ಲು ಅರ್ಜುನ್ ರೇಂಜ್ ಬದಲಾಯಿತು.
‘ಪುಷ್ಪ 2’ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಡಿಸೆಂಬರ್ 4ರಂದು ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ಇಡಲಾಗಿತ್ತು. ಇದು ತಂಡಕ್ಕೆ ಸಹಕಾರಿ ಆಗಿದೆ. ಪ್ರೀಮೀಯರ್ ಶೋಗಳಿಂದ ಚಿತ್ರಕ್ಕೆ 10 ಕೋಟಿ ರೂಪಾಯಿ ಹರಿದು ಬಂದಿದೆ. ಡಿಸೆಂಬರ್ 5ರಂದು ಚಿತ್ರಕ್ಕೆ 165 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ 175 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್ ಲೆಕ್ಕ ಸೇರಿದರೆ ಸಿನಿಮಾದ ಕಲೆಕ್ಷನ್ 250 ಕೋಟಿ ರೂಪಾಯಿ ಸಮೀಪಿಸಲಿದೆ.
ಪುಷ್ಪ 2 ಸಿನಿಮಾದ ಟಿಕೆಟ್ ದರ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಬರೋಬ್ಬರಿ 600 ರೂಪಾಯಿ ಇದ್ದು, ಮುಂಬೈನಂತಹ ಸಿಟಿಗಳಲ್ಲಿ ಟಿಕೆಟ್ ದರ 3000ಕ್ಕೂ ಹೆಚ್ಚಾಗಿದೆ. ಬೆಂಗಳೂರಿನಲ್ಲಿಯೂ ಪುಷ್ಪ 2 ಟಿಕೆಟ್ ಪ್ರೈಸ್ ಸಾವಿರದ ಗಡಿಯಲ್ಲಿದೆ.
175 ಕೋಟಿ ರೂಪಾಯಿ ಪೈಕಿ 95.1 ಕೋಟಿ ರೂಪಾಯಿ ತೆಲುಗು ವರ್ಷನ್ನಿಂದ, ಹಿಂದಿಯಿಂದ 67 ಕೋಟಿ ರೂಪಾಯಿ, ತಮಿಳಿನಿಂದ 7 ಕೋಟಿ ರೂಪಾಯಿ, ಮಲಯಾಳಂನಿಂದ 5 ಕೋಟಿ ರೂಪಾಯಿ ಹಾಗೂ ಕನ್ನಡ ವರ್ಷನ್ನಿಂದ 1 ಕೋಟಿ ರೂಪಾಯಿ ಚಿತ್ರಕ್ಕೆ ಸಿಕ್ಕಿದೆ. ಸಿನಿಮಾದ ಅಬ್ಬರ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ. ಚಿತ್ರವನ್ನು ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ.ಇನ್ನು ಸಿನಿಮಾ ರಿಲೀಸ್ ಆಗಿ ಕೆಲವು ದಿನಗಳ ವರೆಗಂತೂ ಈ ದರ ಬದಲಾಗುವುದಿಲ್ಲ. ಹಾಗಾಗಿ ಆರಂಭಿಕ ವಾರದಲ್ಲಿ ಪುಷ್ಪ 2 ಭರ್ಜರಿ ಕಲೆಕ್ಷನ್ ಮಾಡೋದ್ರಲ್ಲಿ ಸಂದೇಹವೇ ಇಲ್ಲ.