ಸಚಿವ ಶಿವರಾಜ್ ತಂಗಡಗಿ ಹೇಳಿಕೆ ವಿರುದ್ಧ ಕಿಡಿಕಾರಿದ ಆರ್. ಅಶೋಕ್, ಶಿವರಾಜ್ ತಂಗಡಗಿಹಿಂದೆ ಬಿಜೆಪಿಯಲ್ಲಿದ್ದರು. ಸಚಿವರೂ ಆಗಿದ್ದರು. ಸಕ್ಕರೆ ತಿನ್ನಲು ಬಿಟ್ಟಿದ್ದೆವು. ಆಗ ಸೋನಿಯಾ ಗಾಂಧಿಗೆ ಹೊಡೆಯಿರಿ ಎನ್ನುತ್ತಿದ್ದರು. ಈಗ ಕಾಂಗ್ರೆಸ್ಸಿನಲ್ಲಿದ್ದಾಗ ಮೋದಿಗೆ ಹೊಡೆಯಿರಿ ಎನ್ನುತ್ತಾರೆ. ಬಿಜೆಪಿಯಲ್ಲಿದ್ದಾಗ ಸೋನಿಯಾಗೆ ಹೊಡೆಯಿರಿ ಎನ್ನುತ್ತಾರೆ. ಮುಂದೆ ಜನರು ತಂಗಡಗಿಗೇ ಹೊಡೆಯಿರಿ ಎಂದು ಭಾವಿಸಿಯಾರು. ಅವರ ಹೇಳಿಕೆ ಅವರಿಗೇ ತಿರುಗುಬಾಣವಾಗುವ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ ಎಂದು ಆರ್.ಅಶೋಕ ಅವರು ತಿಳಿಸಿದರು.ಕರ್ನಾಟಕದ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಾದ ಸುಸಂಸ್ಕೃತ ಸಚಿವರಾ ಇವರು? ಎಂದು ಪ್ರಶ್ನಿಸಿದರು. ಅವರು ಆ ಖಾತೆಗೆ ಲಾಯಕ್ಕಾ ಎಂಬುದನ್ನು ಕಾಂಗ್ರೆಸ್ ಪಕ್ಷ ಯೋಚಿಸಲಿ ಎಂದು ತಿಳಿಸಿದರು. ಒಬ್ಬ ಶಿಕ್ಷಣ ಸಚಿವ ಹೇಗಿರಬೇಕು? ಒಬ್ಬ ಸಂಸ್ಕೃತಿ ಸಚಿವ ಹೇಗಿರಬೇಕು? ಈ ರೀತಿ ಸಚಿವ ಇರಬೇಕೆಂದು ಜನ ಯೋಚಿಸುತ್ತಾರೆ. ಸಂಸ್ಕೃತಿ ಇಲ್ಲದವರು ಸಂಸ್ಕೃತಿ ಸಚಿವರು. ಹಿಂದೆ ಚಾಯ್ವಾಲಾ ಎಂದಿದ್ದರು. ಬಳಿಕ ಚಾಯ್ ಪೇ ಚರ್ಚಾ ಬಂತು. ಭಾರತದಲ್ಲಿ ಚಾಯ್ ವಾಲಾ ಕೂಡ ಪ್ರಧಾನಿ ಆಗಲು ಸಾಧ್ಯ ಎಂಬ ಸಂದೇಶ ನೀಡಲಾಗಿದೆ. ಆಮೇಲೆ ಚೌಕಿದಾರ್ ಚೋರ್ ಎಂದರು. ನಾವು ಅದನ್ನೇ ಅಸ್ತ್ರ ಮಾಡಿಕೊಂಡೆವು ಎಂದು ವಿವರಿಸಿದರು. ಆಗಲಾದರೂ ಕಾಂಗ್ರೆಸ್ ಬುದ್ಧಿ ಕಲಿಯಬೇಕಿತ್ತು ಎಂದರು.