ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಒಬ್ಬ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯಗೆ ಮಾನ-ಮರ್ಯಾದೆ ಇದೆಯಾ.? ವೋಟಿಗಾಗಿ ನಮ್ಮ ಪಕ್ಷದ ಸಂಸದರ ಮನೆಗೆ ಮಾನ, ಮರ್ಯಾದೆ ಬಿಟ್ಟು ಸಿದ್ದರಾಮಯ್ಯ ಹೋಗಿದ್ದಾರೆ ಅಂತ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.