ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುಗಾದಿ ಹಬ್ಬ ಸಖತ್ತಾಗಿಯೇ ಕಳೆಗಟ್ಟುತ್ತಿದೆ. ಸಂಪ್ರದಾಯಿಕ ಹೊಸ ವರ್ಷವನ್ನ ಸ್ವಾಗತಿಸಲು ಕನ್ನಡಿಗರು ಸಜ್ಜಾಗಿದ್ದಾರೆ. ಆದರೆ ನಗರ ನಂದಿನಿ ಬಡಾವಣೆಯ ಜೈ ಮಾರುತಿನಗರದಲ್ಲಿ ಹೊಸ ವರ್ಷವನ್ನ ಸ್ವಲ್ಪ ಡಿಫ್ರರೆಂಟ್ ಆಗಿಯೇ ವೆಲ್ಕಂ ಮಾಡಿದ್ದಾರೆ. ಯುಗಾದಿ ಹೊಸತೊಡಕು ಹಿನ್ನೆಲೆಯಲ್ಲಿ ಆಯೋಜಿಸಲಾಗಿತ್ತು. ರಾಗಿ ಮುದ್ದೆ ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯಲ್ಲಿ ನೂರಕ್ಕೂ ಅಧಿಕ ಮಂದಿ ಭಾಗಿಯಾಗಿದ್ರು. ಸ್ಪರ್ಧೆಗೆ 30 ನಿಮಿಷಗಳ ಸಮಯ ಅವಕಾಶವಿತ್ತು. ಸ್ಥಳೀಯರಾದ 55 ವರ್ಷದ ವೆಂಕಟರಾಮ ಎಂಬುವರು ಹನ್ನೆರಡೂವರೆ ಮುದ್ದೆ ತಿಂದು ಮೊದಲ ಬಹುಮಾನ ಗೆದ್ದಿದ್ದಾರೆ. ಕುಣಿಗಲ್ ಮೂಲದ ಸೀತಾರಾಮಯ್ಯ ಎಂಬುವರು 12 ಮುದ್ದೆ ತಿಂದು ಎರಡನೇ ಬಹುಮಾನ ಪಡೆದಿದ್ದಾರೆ. ಮೊದಲ ಬಹುಮಾನವಾಗಿ 20 ಕೆಜಿ ತೂಕದ ಮೇಕೆ ಹೋತ, ಎರಡನೇ ಬಹುಮಾನವಾಗಿ 15 ಕೆಜಿ ಕೂತದ ಮೇಕೆ ಹೋತ ಹಾಗೂ 3ನೇ ಬಹುಮಾನವಾಗಿ 10 ಕೆಜಿ ನಾಟಿ ಕೋಳಿ ಬಹುಮಾನವಾಗಿ ನೀಡಲಾಗಿದೆ.