ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದೆ, ಎಲ್ಲಿ ನೋಡಿದರು “ಆಲ್ ಐಸ್ ಆನ್ ರಫಾ” ಎನ್ನುವ ಪೋಸ್ಟ್ ಹರಿದಾಡುತ ಇದೆ.
ಏನಿದು “ಆಲ್ ಐಸ್ ಆನ್ ರಫಾ” ?
ಗಾಜಾದ ರಫಾದಲ್ಲಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯ ವೇಳೆ ಪ್ರಾಣ ಕಳೆದುಕೊಂಡ ಜನರನ್ನು ಬೆಂಬಲಿಸಲು ಹಲವಾರು ಭಾರತೀಯ ಸೆಲೆಬ್ರಿಟಿಗಳು ಸೇರಿದಂತೆ ಜಾಗತಿಕ ಸಮುದಾಯವು ಸಾಮಾಜಿಕ ಮಾಧ್ಯಮದಲ್ಲಿ “ಎಲ್ಲರ ಕಣ್ಣುಗಳು ರಫಾಹ್” ಎಂಬ ನುಡಿಗಟ್ಟು ಸುದ್ದಿ ಮಾಡ್ತಾ ಇದೆ , ಮಿಲಿಯನ್ಗಿಂತಲೂ ಹೆಚ್ಚು ಬಳಕೆದಾರರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ ಡಬ್ಲ್ಯೂ ಹೆಚ್ ಒ ಪ್ರತಿನಿಧಿ ರಿಚರ್ಡ್ ಪೀಪರ್ಕಾರ್ನ್ ಅವರು ಫೆಬ್ರವರಿಯಲ್ಲಿ ಮೊದಲು ಈ ಘೋಷಣೆಯನ್ನು ಮಾಡಿದರು.
ವಾರದ ಹಿಂದೆ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿತ್ತು, ಇಸ್ರೇಲ್ನ ಟೆಲ್ ಅವಿವ್ ನಗರದ ಮೇಲೆ ಬೃಹತ್ ಕ್ಷಿಪಣಿ ದಾಳಿ ಮಾಡಿರುವುದಾಗಿ ಹಮಾಸ್ ಬೆಂಬಲಿತ ಅಲ್ ಖಾಸಮ್ ಸಂಘಟನೆ ಹೇಳಿದೆ. ನಗರದ ಮೇಲೆ ರಾಕೆಟ್ ದಾಳಿ ನಡೆದಿರುವ ಕುರಿತಾಗಿ ಸೈರನ್ ಕೇಳಿ ಬಂದಿದೆ ಎಂದು ಇಸ್ರೇಲ್ ಸೇನೆ ಒಪ್ಪಿಕೊಂಡಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ “ಆಲ್ ಐಸ್ ಆನ್ ರಫಾ” ಎನ್ನುವ ಪೋಸ್ಟ್ ವೈರಲ್ ಆಗ್ತಾ ಇದೆ.