ಬೆಂಗಳೂರು : ಬಿರು ಬಿಸಿಲು ಹಾಗೂ ಹೀಟ್ ವೇವ್ನಿಂದ ಬಳಲಿ ಬೆಂಡಾಗಿದ್ದ ರಾಜಧಾನಿ ಬೆಂಗಳೂರಿಗೆ ವರುಣನ ಎಂಟ್ರಿ ಆಗಿದೆ. ಬರೋಬ್ಬರಿ ಐದಾರು ತಿಂಗಳ ಬಳಿಕ ಸಿಲಿಕಾನ್ ಸಿಟಿಯಲ್ಲಿ ಮಳೆರಾಯನ ಸಿಂಚನ ಆಗಿದ್ದು, ಮೆಜೆಸ್ಟಿಕ್, ಆರ್.ಟಿ.ನಗರ. ಮೇಖ್ರಿ ಸರ್ಕಲ್, ಹೆಬ್ಬಾಳ, ಟೌನ್ ಹಾಲ್, ಬಸವನಗುಡಿ, ಜಯನಗರ, ಬ್ಯಾಟರಾಯನಪುರ, ಯಲಹಂಕ, ಕೆಆರ್ ಮಾರ್ಕೆಟ್, ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಈ ಸಾಧಾರಣ ಮಳೆಗೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದ್ದಾರೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಹೀಗೆ ಮಳೆಯಾಗಲಿದೆ. ಹೀಗಾಗಿ ನಗರದಲ್ಲಿ ಬಿಸಿಲಿನ ಹಬೆ ಕಡಿಮೆಯಾಗಿ ತಂಪಾದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.