ಮಾರ್ಚ್ 1…ಇಡೀ ಬೆಂಗಳೂರು ಅಕ್ಷರಶಃ ಬೆಚ್ಚಿ ಬಿದ್ದಿತ್ತು. ಸದಾ ಬ್ಯುಸಿ ಆಗಿರೋ ಕುಂದಲಹಳ್ಳಿ ದಿ ಫೇಮಸ್ ರಾಮೇಶ್ವರ್ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಸಿಲಿಕಾನ್ ಸಿಟಿ ಮಂದಿಯ ಎದೆಯನ್ನ ನಡುಗಿಸಿತ್ತು. ರವೆ ಇಡ್ಲಿ ತಿಂದು ಬಾಂಬ್ ಇಟ್ಟು ಹೋದ ಬದ್ಮಾಶ್..ಬಾಂಬರ್ ನನ್ನ ಕೊನೆಗೂ ಎನ್ ಐಎ ಅಧಿಕಾರಿಗಳಿ ಖೆಡ್ಡಾಕ್ಕೆ ಕೆಡವಿದ್ದಾರೆ. ಇಲ್ಲಿ ಬಾಂಬ್ ಇಟ್ಟು ಕೋಲ್ಕತಾದಲ್ಲಿ ಅವಿತುಕೊಂಡಿದ್ದ ಶಂಕಿತ ಉಗ್ರರು ಈಗ ಬಲೆಗೆ ಬಿದ್ದಿದ್ದು..ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗಾದ್ರೆ ಬಾಂಬರ್ ಸಿಕ್ರೇಟ್ ಹೆಜ್ಜೆಗಳು ಭೇದಿಸಿದ ಅಧಿಕಾರಿಗಳ..ಕಾರ್ಯಾಚರಣೆಯನ್ನ ಸೀನ್ ಬೈ ಸೀನ್ ಡೀಟೆಲ್ಸ್ ಇಲ್ಲಿದೆ ನೋಡಿ..
ಬಾಂಬರ್ ರೂಟ್ ಮ್ಯಾಪ್..!
ಸೀನ್ 1 : ಮಾರ್ಚ್ 1 ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ಉಗ್ರ
ಸೀನ್ 2 : ಶಂಕಿತರ ಜಾಡು ಹಿಡಿದು ಬಳ್ಳಾರಿ, ಶಿವಮೊಗ್ಗ ಸೇರಿ ಹಲವೆಡೆ ಶೋಧ
ಸೀನ್ 3 : 900ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲಿಸಿದ ಎನ್ ಐಎ ಅಧಿಕಾರಿಗಳು
ಸೀನ್ 4 : ಬಾಂಬರ್ ಧರಿಸಿದ್ದ ಕ್ಯಾಪ್ ನೀಡಿದ್ದ ಮಹತ್ವದ ಕ್ಲೂ
ಸೀನ್ 5 : ಶಂಕಿತ ಚೆನ್ನೈನಲ್ಲಿ ಕ್ಯಾಪ್ ಖರೀದಿಸಿದ್ದ ಬಗ್ಗೆ ಮಾಹಿತಿ
ಸೀನ್ 6 : ಸ್ಫೋಟದ ಬಳಿಕ ಬಳ್ಳಾರಿ ಮೂಲಕ ಕರ್ನಾಟಕದಿಂದ ಎಸ್ಕೇಪ್
ಸೀನ್ 7 : ಕೇರಳ, ತೆಲಂಗಾಣ ಇದ್ದು..ನಂತರ ಪಶ್ಚಿಮ ಬಂಗಾಳಕ್ಕೆ ಶಿಫ್ಟ್
ಸೀನ್ 8 : ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಮುಜಾಮಿಲ್ ಷರೀಫ್ ಬಂಧನದ ಮಾಹಿತಿ
ಸೀನ್ 9 : ಮುಜಾಮಿಲ್ ಷರೀಫ್ & ಜೈಲಿನಲ್ಲಿದ್ದ ಮಾಝ್ ತೀವ್ರ ವಿಚಾರಣೆ
ಸೀನ್ 10 : ವಿಚಾರಣೆ ವೇಳೆ ಬಾಂಬರ್ ಕೋಲ್ಕತಾದಲ್ಲಿರುವ ಬಗ್ಗೆ ಮಾಹಿತಿ
ಸೀನ್ 11 : ಮಾಹಿತಿ ಸಿಗುತ್ತಿದ್ದಂತೆ ಕೋಲ್ಕತಾದಲ್ಲಿ ಎನ್ ಐಎ ಕಾರ್ಯಾಚರಣೆ
ಸೀನ್ 12 : ಶಂಕಿತರು ಉಳಿದುಕೊಂಡಿದ್ದ ಹೋಟೆಲ್ ಬಗ್ಗೆ ಮಾಹಿತಿ
ಸೀನ್ 13 : ಶಂಕಿತರಿಂದ ಹಿಂದೂಗಳ ಹೆಸರಿನಲ್ಲಿ ಆಧಾರ್ ಕಾರ್ಡ್ ಬಳಕೆ
ಸೀನ್ 14 : ಕೋಲ್ಕತಾದಲ್ಲಿ 2 ಹೋಟೆಲ್ ಚೇಂಜ್ ಮಾಡಿದ್ದ ಉಗ್ರರು
ಸೀನ್ 15 : ಖಚಿತ ಮಾಹಿತಿ ಮೇರೆಗೆ ಕೋಲ್ಕತಾದಲ್ಲಿ ಬಾಂಬರ್ ಮುಸಾವೀರ್ ಬಂಧನ