ಆರ್ಸಿಬಿ ಇತ್ತೀಚೆಗಷ್ಟೇ ಬ್ಯಾಕ್ ಟು ಬ್ಯಾಕ್ 2 ಪಂದ್ಯ ಗೆದ್ದು ಆರ್ ಸಿಬಿ ಅಭಿಮಾನಿಗಳಿಗಂತೂ ಫುಲ್ ಖುಷ್ ಪಡಿಸಿತ್ತು. 10 ಪಂದ್ಯಗಳಲ್ಲಿ ಕೇವಲ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ, ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು,ಇದರಿಂದ ನೆಟ್ ರನ್ ರೇಟ್ ಚೂರು ಸುಧಾರಿಸಿದೆ.
ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಣ ಬಿಸಿಲಿನ ನಡುವೆ ನಿನ್ನೆ ಜೋರು ಮಳೆಯಾಗಿದ್ದು, ಇನ್ನೂ ಮೂರು ದಿನಗಳ ಕಾಲ ವರುಣನ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಹೀಗಾಗಿ ಎಂ. ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆಯಲಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯ ರದ್ದಾಗಲಿದೆ ಎನ್ನಲಾಗುತ್ತಿದೆ.
ಇನ್ನು ಹವಾಮಾನ ಇಲಾಖೆ ವರದಿಯ ಪ್ರಕಾರ ಆರ್ಸಿಬಿ ಮತ್ತು ಗುಜರಾತ್ ನಡುವಿನ ಪಂದ್ಯದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು ಇಂದು ರಾತ್ರಿ ಮ್ಯಾಚ್ ನಡೆಯೋ ಕಾರಣ ಸಂಜೆ ಭರ್ಜರಿ ಮಳೆಯಾಗೋ ಸಾಧ್ಯತೆ ಇರುವ. ಕಾರಣ ಪಂದ್ಯ ರದ್ದು ಕೂಡ ಆಗಬಹುದು.