ಕಳೆದ ಶನಿವಾರ ರಾತ್ರಿ ಆರ್ಸಿಬಿ ತಂಡವು ಸಿಎಸ್ಕೆ ವಿರುದ್ಧ ಅದ್ಭುತ ಗೆಲುವು ದಾಖಲಿಸಿ ಪ್ಲೇ-ಆಫ್ ಪ್ರವೇಶ ಮಾಡಿದೆ. RCB ಪ್ಲೇ-ಆಫ್ ಪ್ರವೇಶವನ್ನು ಅಭಿಮಾನಿಗಳು ಸಖತ್ ಸೆಲೆಬ್ರೇಟ್ ಮಾಡಿದ್ದಾರೆ. ಈ ವೇಳೆ ಆರ್ಸಿಬಿಯ ಕೆಲವು ಅಭಿಮಾನಿಗಳು.. CSK ಜರ್ಸಿ ಹಾಕಿಕೊಂಡು ಬಂದಿದ್ದ ಅಭಿಮಾನಿಗಳನ್ನು ನಿಂದಿಸಿದ್ದಾರೆ. ಜೊತೆಗೆ ಅಪಹಾಸ್ಯ ಮಾಡಿದ್ದಾರೆ̤ ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.
ಅಷ್ಟಕ್ಕೂ RCB ಪ್ಯಾನ್ಸ್ ಮಾಡಿದ್ದಾದ್ರು ಏನು..?
ಪಂದ್ಯ ನಂತರ ನಡೆದ ದೃಶ್ಯ . ಸಿಎಸ್ಕೆ ಅಭಿಮಾನಿಗಳಿದ್ದ ಕಾರು ಹೋಗುತ್ತಿರುತ್ತದೆ. ಆದರೆ ರಸ್ತೆಯಲ್ಲಿ ಆರ್ಸಿಬಿ ಅಭಿಮಾನಿಗಳು ಸಂಭ್ರಮದಲ್ಲಿ ಮುಳುಗಿದ್ದಾರೆ. ಇದೇ ಸಮಯಕ್ಕೆ ಸಿಎಸ್ಕೆ ಜರ್ಸಿ ಹಾಕಿಕೊಂಡು ಕಾರಿನಲ್ಲಿ ಕೂತಿದ್ದ ಸಿಎಸ್ಕೆ ಅಭಿಮಾನಿಗಳನ್ನ ನೋಡಿದ ತಕ್ಷಣ ಆರ್ಸಿಬಿ.. ಆರ್ಸಿಬಿ. ಎಂದು ಜೋರಾಗಿ ಕೂಗಿದ್ದಾರೆ.
ಕಾರು ಮುಂದೆ ಹೋಗದಂತೆ ತಡೆದಿದ್ದರಿಂದ.. ಸಿಎಸ್ಕೆ ಧೋನಿ ಅಭಿಮಾನಿಯೊಬ್ಬ ಕಾರಿನ ಮೇಲೆ ನಿಂತು ತಾವು ಧರಿಸಿದ್ದ ಜರ್ಸಿಯನ್ನು ಆರ್ಸಿಬಿ ಅಭಿಮಾನಿಗಳಿಗೆ ತೋರಿಸಿದ್ದಾರೆ. ಸಿಎಸ್ಕೆ ಅಭಿಮಾನಿಯ ಧೈರ್ಯವನ್ನು ಮೆಚ್ಚಲೇಬೇಕು ಎಂದು ಕೆಲವರು ಹೇಳಿದ್ರೆ ಇನ್ನೂ ಕೆಲವರು ಆರ್ಸಿಬಿ ಅಭಿಮಾನಿಗಳ ಈ ರೀತಿಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು Worship Dhoni ಎಂಬ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ನೂರಾರು ಆರ್ಸಿಬಿ ಅಭಿಮಾನಿಗಳು ಸಿಎಸ್ಕೆ ಫ್ಯಾನ್ಸ್ ಕಾರಿನ ಸುತ್ತ ಜಮಾಯಿಸಿದ್ದರು. ಕಾರಿನಲ್ಲಿದ್ದ ಸಿಎಸ್ಕೆ ಅಭಿಮಾನಿ ಇಟ್ಕೊಂಡಿದ್ದ ಧೋನಿ ಅವರ ಜರ್ಸಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಅವರು ನಿರ್ಭಯವಾಗಿ ಹಾಗೂ ಹೆಮ್ಮೆಯಿಂದ ಜರ್ಸಿಯನ್ನು ಪ್ರದರ್ಶನ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.