ರಾಯಲ್ ಮಲೇಷ್ಯಾ ನೇವಿಯ ಎರಡು ಹೆಲಿಕಾಪ್ಟರ್ಗಳು ಆಗಸದಲ್ಲಿ ಡಿಕ್ಕಿಯಾದ ಪರಿಣಾಮ ಒಳಗಿದ್ದ 10 ಸಿಬ್ಬಂದಿ ಸಾವನ್ನಪ್ಪಿದ್ದಾರೆ. 2 ಹೆಲಿಕಾಪ್ಟರ್ಗಳು ಡಿಕ್ಕಿಯಾಗುತ್ತಿರುವ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕೆಲವೇ ಕ್ಷಣದಲ್ಲಿ ನೆಲಕ್ಕೆ ಬಿದ್ದ ಕಾಪ್ಟರ್ಸ್ ಸಂಪೂರ್ಣವಾಗಿ ಸುಟ್ಟು ಹೋಗಿವೆ ಎಂದು ಹೇಳಲಾಗಿದೆ. ಮಲೇಷ್ಯಾದ ಲುಮುಟ್ ಪಟ್ಟಣದ ನೌಕಾ ನೆಲೆಯಲ್ಲಿ ಹೆಲಿಕಾಪ್ಟರ್ಗಳು ಅಭ್ಯಾಸ ನಡೆಸುತ್ತಿರುವ ವೇಳೆ ಈ ಅವಘಡ ಸಂಭವಿಸಿದೆ. ಪರಿಣಾಮ ಎರಡು ಹೆಲಿಕಾಪ್ಟರ್ನಲ್ಲಿದ್ದ 10 ಸಿಬ್ಬಂದಿ ಆಗಸದಲ್ಲೇ ಉಸಿರು ಚೆಲ್ಲಿದ್ದಾರೆ.
ಒಂದು ಹೆಲಿಕಾಪ್ಟರ್ನಲ್ಲಿ 7 ಮಂದಿ, ಇನ್ನೊಂದು ಹೆಲಿಕಾಪ್ಟರ್ನಲ್ಲಿ ಮೂವರು ಮೃತಪಟ್ಟಿದ್ದಾರೆ. ಮಲೇಷ್ಯಾದ ಉತ್ತರ ಪೆರಾಕ್ ನೌಕಾ ನೆಲೆಯಲ್ಲಿ ನಡೆಯಲಿರುವ ರಾಯಲ್ ಮಲೇಷ್ಯಾ ನೇವಿಯ 90ನೇ ವಾರ್ಷಿಕೋತ್ಸವದ ಆಚರಣೆಯ ಪೂರ್ವಾಭ್ಯಾಸದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ ಎಂದು ಅಲ್ಲಿನ ನೌಕಾಪಡೆ ವರದಿ ಮಾಡಿದೆ.