ಅಪ್ರಾಪ್ತ ಬಾಲಕನೊಬ್ಬ ಎಡವಟ್ಟಿನಿಂದ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪುಣೆಯ ಕಲ್ಯಾಣ ನಗರದಲ್ಲಿ ನಡೆದಿದೆ.
ಐಷಾರಾಮಿ ಫೋರ್ಶ್ ಕಾರನ್ನು ಅಪ್ರಾಪ್ತ ವೇದಾಂತ್ ಅಗರ್ವಾಲ್ (17) ಚಾಲನೆ ಮಾಡಿದ್ದಾನೆ.ಇದೇ ವೇಳೆ ಬೈಕ್ನಲ್ಲಿ ಅನೀಶ್ ಅವಾಡಿಯಾ ಮತ್ತು ಅಶ್ವಿನಿ ಕೋಸ್ಟಾ ಎಂಬುವವರು. ಮನೆಗೆ ತೆರಳುತ್ತಿದ್ದರು. ಅತಿ ವೇಗವಾಗಿ ಬಂದು ಬೈಕ್ಗೆ ನಗರದ ಜಂಕ್ಷನ್ ಬಳಿ ಪೋರ್ಶ್ ಟೈಕಾನ್ ಕಾರಿನಲ್ಲಿ ಭಯಾನಕವಾಗಿ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಇಬ್ಬರು ವ್ಯಕ್ತಿಗಳು ಗಾಳಿಯಲ್ಲಿ ಹಾರಿಕೊಂಡು ಹೋಗಿ ಇನ್ನೊಂದು ಕಾರಿನಡಿ ಬಿದ್ದಿದ್ದಾರೆ. ಇದರಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕಾರು ಆಕ್ಸಿಡೆಂಟ್ ಆಗುತ್ತಿದ್ದಂತೆ ಸ್ಥಳೀಯರು ಓಡೋಡಿ ಬಂದು ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.