ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಎರಡನೇ ಮಗುವಿಗೆ ತಂದೆ ಆಗಲಿದ್ದಾರೆ ಎಂಬ ಸುದ್ದಿ ಇದೆ. ಇದೇ ಕಾರಣಕ್ಕೆ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ.
ರೋಹಿತ್ ಶರ್ಮಾ ಈ ಟೆಸ್ಟ್ ಸರಣಿಯಿಂದ ದೂರ ಉಳಿದಿರೋದು ಅನೇಕರ ಟೇಕೆಗೆ ಕಾರಣವಾಗಿದೆ. ಇದೀಗ ರಿತಿಕಾ ಸಜ್ದೇ ರೋಹಿತ್ರನ್ನು ಸಮರ್ಥಿಸಿಕೊಂಡಿದ್ದಾರೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿಕೆಗೆ ರಿತಿಕಾ ಪ್ರತಿಕ್ರಿಯಿಸಿದ್ದು, ಪತಿಯ ವಿರುದ್ಧ ಮಾತನಾಡಿದವರಿಗೆ ಒಂದೇ ಒಂದು ಎಮೋಜಿ ಮೂಲಕ ಉತ್ತರ ಕೊಟ್ಟಿದ್ದಾರೆ.
ಗವಾಸ್ಕರ್ ಏನ್ ಹೇಳಿದ್ದರು..?
ಸ್ಪೋರ್ಟ್ಸ್ ಟಾಕ್ ಜೊತೆ ಮಾತನಾಡಿದ್ದ ಗವಾಸ್ಕರ್.. ರೋಹಿತ್ ಶರ್ಮಾ ಮೊದಲ ಟೆಸ್ಟ್ನಲ್ಲಿ ಆಡುವುದಿಲ್ಲ ಎಂದು ಓದುತ್ತಿದ್ದೇವೆ. ಬಹುಶಃ ಅವರು ಎರಡನೇ ಟೆಸ್ಟ್ನಲ್ಲೂ ಆಡುವುದಿಲ್ಲ ಎಂದು ಓದುತ್ತಿದ್ದೇವೆ. ಹಾಗಿದ್ದಲ್ಲಿ ಅವರು ನಾಯಕರಲ್ಲ. ನಾವು ನ್ಯೂಜಿಲೆಂಡ್ ಸರಣಿಯನ್ನು 3-0 ಅಂತರದಲ್ಲಿ ಗೆದ್ದಿದ್ದರೆ ಅದು ಬೇರೆ ವಿಷಯ. ನಾವು ಸರಣಿಯನ್ನು ಕಳೆದುಕೊಂಡಿರುವುದರಿಂದ ನಾಯಕನ ಅವಶ್ಯಕತೆ ಇದೆ. ನಾಯಕನೇ ತಂಡವನ್ನು ಒಗ್ಗೂಡಿಸಬೇಕು ಎಂದಿದ್ದರು.
ಇದನ್ನು ಓದಿ: ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷೆ!
ಇದಕ್ಕೆ ಪ್ರತಿಕ್ರಿಯಿಸಿದ್ದ ಪಿಂಚ್.. ನಾನು ಇದನ್ನು ಒಪ್ಪಲ್ಲ. ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕರಾಗಿದ್ದಾರೆ. ನಿಮ್ಮ ಹೆಂಡತಿ ಮಗುವಿಗೆ ಜನ್ಮ ನೀಡಲಿರುವ ಕಾರಣ ನೀವು ಮನೆಯಲ್ಲಿ ಇರುವುದು ಅವಶ್ಯಕ. ಅದು ಅತ್ಯಂತ ಸುಂದರವಾದ ಕ್ಷಣ. ಈ ನಿಟ್ಟಿನಲ್ಲಿ ನಿಮ್ಮೆಲ್ಲ ಸಮಯವನ್ನು ನೀವು ಕಳೆಯಬಹುದು ಎಂದಿದ್ದರು. ಫಿಂಚ್ನ ಈ ಕಾಮೆಂಟ್ಗೆ ರಿತಿಕಾ ಪ್ರತಿಕ್ರಿಯಿಸಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಫಿಂಚ್ ಮತ್ತು ಗವಾಸ್ಕರ್ ಹೇಳಿಕೆಗಳನ್ನು ಬರೆಯಲಾಗಿದೆ. ಅದಕ್ಕೆ ರಿತಿಕಾ ಸೆಲ್ಯೂಟ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ‘ನಿಮ್ಮ ಹೆಂಡತಿಗೆ ಮುಗುವಾಗುವುದಾದರೆ..’ ಎಂದು ಪಿಂಚ್ ನೀಡಿದ್ದ ಪ್ರತಿಕ್ರಿಯೆಯನ್ನು ರೋಹಿತ್ ಪತ್ನಿ ಸಮರ್ಥಿಸಿಕೊಂಡು ಗವಾಸ್ಕರ್ಗೆ ಟಾಂಟ್ ನೀಡಿದ್ದಾರೆ.