ಸಂಚಾರಿ ಪೊಲೀಸರು ಅದೆಷ್ಟೇ ಎಚ್ಚರಿಕೆ ವಹಿಸಿದ್ರು, ಸಂಚಾರಿ ನಿಯಮ ಉಲ್ಲಂಘನೆ ಮಾಡೋರ ಸಂಖ್ಯೆ ಮಾತ್ರ ಕಡಿಮೆ ಆಗ್ತಿಲ್ಲ. ರಾಜ್ಯದಲ್ಲಿ ದಾಖಲೆಯ 3.25 ಕೋಟಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ದಂಡದ ಮೊತ್ತ 1,700 ಕೋಟಿ ರೂ ಬಾಕಿ ಇದೆ. ಇನ್ನು ಬೆಂಗಳೂರು ನಗರ ವೊಂದರಲ್ಲೇ 1,425 ಕೋಟಿ ಮೊತ್ತ ದಂಡ ಬಾಕಿ ಇದೆ. ರಾಜ್ಯ ತರಬೇತಿ, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಮ್ಮ X ಖಾತೆ ಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 2024ರ ಮಾರ್ಚ್ 31 ವರೆಗೆ ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಸಂಬಂಧಿಸಿದಂತೆ 1,700 ಕೋಟಿ ದಂಡ ಮೊತ್ತ ಬಾಕಿ ಇದ್ದು, ಈ ಹಿಂದೆ ರಿಯಾಯಿತಿ ದರದಲ್ಲಿ ದಂಡ ಮೊತ್ತ ಪಾವತಿಸಲು ಅವಕಾಶ ಕೊಟ್ಟಿದು ಅಷ್ಟಾಗಿ ಪ್ರಯೋಜನ ಆಗುತ್ತಿಲ್ಲ ಎಂದು ಹೇಳಲಾಗಿದೆ.