ಭಾರತದ “ರುದ್ರ ಎಂ ಐ ಐ” ಕ್ಷಿಪಣಿಯ ಯಶಸ್ವಿಗೆ ಜಗತ್ತೇ ಪ್ರಶಂಸೆ ವ್ಯಕ್ತಪಡಿಸುತ್ತಿದೆ. DRDO ನಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದ್ದು ಇದರೊಂದಿಗೆ ಭಾರತದ ವಾಯುಪಡೆಗೆ ಬಲ ಹೆಚ್ಚಾಗಿದೆ.
ವಾಯುಪಡೆಯ ಎಸ್ ಯು 30 ಯುದ್ಧ ವಿಮಾನದ ಮೂಲಿಕ ಒಡಿಶಾ ಕರಾವಳಿ ಪ್ರದೇಶದಲ್ಲಿ ಪರೀಕ್ಷೆ ನಡೆಸಲಾಗಿದೆ. ಕ್ಷಿಪಣಿಯು ಎಲ್ಲಾ ರೀತಿಯ ಪ್ರಯೋಗಿಕ ಉದ್ದೇಶಗಳನ್ನ ಪೂರೈಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಗಮನಾರ್ಹ ಅಂಶವೆಂದರೆ ದೇಶಿಯವಾಗಿ ಅಭಿವೃದ್ಧಿಗೊಳಿಸಿದ ತಂತ್ರಜ್ಞಾನದ ಮೂಲಕ ಈ ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸಲಾಗಿದೆ, ಪರೀಕ್ಷೆ ಯಶಸ್ವಿಗೊಂಡಿದ್ದಕ್ಕೆ ರಕ್ಷಣ ಸಚಿವ ರಾಜನಾಥ್ ಸಿಂಗ್ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.