ನಟಿ ಸಮಂತಾ ಅವರು ಇತ್ತೀಚೆಗೆ ಬೇರೆ ಬೇರೆ ವಿಚಾರಕ್ಕೆ ಯಾವಗಲೂ ಸುದ್ದಿಯಲ್ಲಿರ್ತಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ಗಳು ಆಗಾಗ ಗಮನ ಸೆಳೆಯುತ್ತವೆ.
ಸಮಂತಾ ಪೋಸ್ಟ್ ವಿಷಯ ಗೊತ್ತಾ..?
ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ದ ಆರ್ಸಿಬಿ ಗೆಲ್ಲಲಿ ಎಂದು ಅನೇಕರು ಪ್ರಾರ್ಥಿಸುತ್ತಿದ್ದಾರೆ. ಇದೇ ಬೆನ್ನಲ್ಲೆ ಸಮಂತಾ ಅವರು ವಿರಾಟ್ ಕೊಹ್ಲಿ ಅವರ ಆರ್ಸಿಬಿ ತಂಡ ಗೆಲ್ಲಲಿ ಎಂದು ಪ್ರಾರ್ಥಿಸಿದರೇ..? ಎನ್ನುವ ಅನುಮಾನ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಕಾಣಸ್ತಿದೆ.
ಇನ್ಸ್ಟಾಗ್ರಾಮ್ನಲ್ಲಿ ‘ನಾನು ನಿಮ್ಮ ಗೆಲುವನ್ನು ನೋಡಲು ಬಯಸುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ ಸಮಂತಾ. ಇಷ್ಟಕ್ಕೆ ನಿಂತಿಲ್ಲ. ಅವರು ಇದಕ್ಕೆ ಕ್ಯಾಪ್ಶನ್ ಕೂಡ ನೀಡಿದ್ದಾರೆ. ‘ನಿಮ್ಮ ಹೃದಯವು ಏನನ್ನು ಬಯಸಿದರೂ, ನೀವು ಯಾವುದೇ ಆಕಾಂಕ್ಷೆಗಳನ್ನು ಹೊಂದಿದ್ದರೂ, ನಾನು ನಿಮಗಾಗಿ ಬೇರೂರಿರುವೆ. ನೀವು ಗೆಲುವಿಗೆ ಅರ್ಹರು’ ಎಂದು ಸಮಂತಾ ಪೋಸ್ಟ್ ಮಾಡಿದ್ದಾರೆ. ಇದರಿಂದ ಸಮಂತಾ ಆರ್ಸಿಬಿ ಮತ್ತು ವಿರಾಟ್ ಮೇಲೆ ಲವ್ ಆಯತಾ ಅನ್ನೋ ಅನುಮಾನ ಎಲ್ಲರಲ್ಲೂ ಶುರುವಾಗಿದೆ.